ಕೋಲಾರ: ಮನೆಗಳಲ್ಲಿ ಕಳ್ಳತನ ಮಾಡಿ ತಲೆ ಮರಿಸಿಕೊಂಡಿದ್ದ ಆರೋಪಿಯನ್ನು, ನಗರ ಗಲ್ಪೇಟೆ ಪೊಲೀಸರು ಬಂಧಿಸಿ ನ್ಯಾಯಾಂಗಬಂಧನಕ್ಕೆ ಒಪ್ಪಿಸಿದ್ದಾರೆ.
ನಗರದ ಬಿಡಿ ಕಾಲೋನಿ ನಿವಾಸಿ ಶೇಖ್ ಬಾಬ (30) ಲಾರಿ ಚಾಲಕನವಾಗಿದ್ದು, ನಗರ ಸೇರಿದಂತೆ ವಿವಿಧೆಡೆ ನಡೆದಿರುವ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಸುಮಾರು 2,66,000 ಬೆಲೆ ಬಾಳುವ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯು ಯಾರು ಇಲ್ಲದ ಮನೆಗಳ ಮೇಲೆ ನಿಗಾಇಟ್ಟು ಚಿನ್ನಾಬರಣ, ನಗದು ದೋಚಿ ಪರಾರಿಯಾಗಿದ್ದರು. ಪೊಲೀಸ್ ಮನೆ ಸೇರಿದಂತೆ ವಿವಿಧೆಡೆ ಕಳವು ಪ್ರಕರಣಗಳ ಸಂಬಂಧ ಆಸಾಮಿ ವಿರುದ್ಧ ದೂರು ದಾಖಲಾಗಿತ್ತು.
ಆರೋಪಿಯ ಪತ್ತೆಗೆ ಎಸ್ಪಿ ಬಿ.ನಿಖಿಲ್ ಅವರು ತನಿಖಾ ತಂಡ ರಚನೆ ಮಾಡಿದ್ದು, ಅವರು ತನಿಖೆ ಕೈಗೊಂಡು ಸೋಮವಾರ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳವು ಮಾಡಿರುವ ಕುರಿತು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಎಆರ್ ಪೊಲೀಸ್ ಸಿಬ್ಬಂದಿ ಮನೆಯಲ್ಲಿ 2,43,000 ಮೌಲ್ಯದ ಚಿನ್ನ 27 ಗ್ರಾಂ, 23 ಸಾವಿರ ಮೌಲ್ಯದ ಬೆಳ್ಳಿ ಆಭರಣಗಳು 300 ಗ್ರಾಂ ವಶಪಡಿಸಿಕೊಂಡಿದ್ದಾರೆ. ತನಿಖಾ ತಂಡದ ಕಾರ್ಯವೈಖರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಶ್ಲಾಘಿಸಿದ್ದಾರೆ.