ಲೋಕ ಬಲೆಗೆ ಬಿದ್ದ ಇಂಜಿನಿಯರ್​

ಲೋಕಾಯುಕ್ತ ಕಚೇರಿ
ಲೋಕಾಯುಕ್ತ ಕಚೇರಿ
Published on
ಕೋಲಾರ: ನರೇಗಾ ಅಭಿವೃದ್ಧಿ ಕಾಮಗಾರಿಗೆ ಬಿಲ್​ ಮಾಡುವ ಸಂಬಂಧ ಗುತ್ತಿಗೆದಾರನಿಂದ ಲಂಚ ಸ್ವೀಕರಿಸುವಾಗ ಮುಳಬಾಗಿಲು ನರೇಗಾ ಇಂಜನಿಯರ್​ ಕೃಷ್ಣಪ್ಪ ಮಂಗಳವಾರ ಲೋಕಾಯುಕ್ತ ಬಲೆಗೆ ಸಿಕ್ಕಿಬಿದಿದ್ದಾನೆ.
ಕಾಮಗಾರಿ ಬಾಕಿ ಬಿಲ್​ ಬಿಡುಗಡೆ ಮಾಡಲು ಗುತ್ತಿಗೆದಾರನಿಗೆ 4 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು, ಅದರಂತೆ ಗುತ್ತಿಗೆದಾರ ಕೃಷ್ಣಮೂರ್ತಿ ಮಂಗಳವಾರ ಇಂಜನಿಯರ್​ ಕೃಷ್ಣಪ್ಪ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.
ಅಧಿಕಾರಿಗಳ ಸಭೆಯಲ್ಲಿ ಇದ್ದ ಇಂಜನಿಯರ್​ ಕೃಷ್ಣಪ್ಪ ಜಿ.ಪಂ ಸಹಾಯಕ ಸಿಬ್ಬಮದಿ ಮಹಮದ್​ ಅಲೀಲ್​ ಉಲ್ಲಾ ಕರೆ ಮಾಡಿ ಹಣ ತೆಗೆದು ಇಟ್ಟುಕೊಂಡು ಇರು, ಸಭೆ ನಂತರ ತೆಗೆದುಕೊಳ್ಳುವುದಾಗಿ ಹೇಳಿದ್ದು, ಅದರಂತೆ ಆಲಿ 2 ಲಕ್ಷ ರೂ. ಸ್ವೀಕರಿಸುವ ಸಮಯದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇದಕ್ಕೆ ಕಾರಣವಾಗಿರುವ ಎಂಜನಿಯರ್​ ಕೃಷ್ಣಪ್ಪ, ಸಹಾಯ ಮಾಡಿದ ಆಲಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ಅಂಟೋನಿ ಜಾನ್​ ಮಾರ್ಗದರ್ಶನದ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
* ಏನಿದು ಪ್ರಕರಣ..?
ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುಡಿಯನೂರು ಗ್ರಾಮದ ಸಮೀಪದ ಕಾಲುವೆ ನಿರ್ಮಾಣವನ್ನು ನರೇಗಾ ಯೋಜನೆಯಡಿ 2023&24ನೇ ಸಾಲಿನಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಸದರಿ ಕಾಮಗಾರಿಗೆ ಕೂಲಿ 6.11 ಲಕ್ಷ, ಸಾಮಾಗ್ರಿ 32.6 ಲಕ್ಷ ಸೇರಿ ಒಟ್ಟು 99.3 ಲಕ್ಷ ಬಿಲ್​ ಆಗಿದೆ. ಈ ಸಂಬಂಧ ಅಂದಾಜು ಪಟ್ಟಿ ತಯಾರಿಸಿ ಜಿ.ಪಂನಿಂದ ಅನುಮೋದನೆ ಸಹ ಪಡೆದು ಕೆಲವನ್ನು ಪೂರ್ಣಗೊಳಿಸಲಾಗಿದೆ. ಆದರೆ ಅಂದಿನಿಂದ ಇಲ್ಲಿಯವರೆಗೂ ಇಂಜನಿಯರ್​ ಕೃಷ್ಣಪ್ಪ ಗುತ್ತಿಗೆದಾರನಿಗೆ ಬಿಲ್​ ಪಾವತಿ ಮಾಡಲು ಸತ್ತಾಯಿಸುತ್ತಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net