ನಗರಸಭೆ ಆಸ್ತಿ ಕಬಳಿಸಲು ಯತ್ನ...?

ಕೋಲಾರ ನಗರಸಭೆ ಜಾಗದಲ್ಲಿರುವ ಮಹಿಳಾ ಸಮಾಜ ಕಟ್ಟಡ.
ಕೋಲಾರ ನಗರಸಭೆ ಜಾಗದಲ್ಲಿರುವ ಮಹಿಳಾ ಸಮಾಜ ಕಟ್ಟಡ.
Published on
ಕೋಲಾರ: ನಗರದ ಪ್ರತಿಷ್ಠಿತ ಮಹಿಳಾ ಸಮಾಜ ಶಿಕ್ಷಣ ಸಂಸ್ಥೆಯು ನಗರಸಭೆ ಆಸ್ತಿಯನ್ನು ಅಕ್ರಮವಾಗಿ ಪರಭಾರೆ ಮಾಡಿಕೊಳ್ಳಲು ನಕಲಿ ದಾಖಲೆ ಸೃಷ್ಟಿಸಿದ ಆರೋಪ ಕೇಳಿ ಬಂದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಅನುಮತಿ ಕೋರಿ ರಾಜ್ಯ ಪೌರಾಡಳಿತ ನಿರ್ದೇಶಕರಿಗೆ ಜಿಲ್ಲಾಡಳಿತವು ತನಿಖಾ ವರದಿ ಸಲ್ಲಿಸಿದೆ.
ನಗರಸಭೆಯ ಆಸ್ತಿ ಕಬಳಿಸುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ನಗರಸಭೆಯ ಈ ಹಿಂದಿನ ಸದಸ್ಯರಾದ ಪ್ರವೀಣ್‌ಗೌಡ ಮತ್ತು ಎಸ್.ಆರ್.ಮುರಳಿಗೌಡ ಪೌರಾಡಳಿತ ನಿರ್ದೇಶನಾಲಯಕ್ಕೆ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ದೂರಿನ ಮೇರೆಗೆ ತನಿಖಾ ತಂಡ ಸಹ ರಚನೆ ಮಾಡಲಾಗಿದ್ದು, ತಂಡವು ದಾಖಲೆಗಳನ್ನು ಪರಿಶೀಲಿಸಿ ವರದಿ ತಯಾರಿಸಿದ್ದು, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸರ್ಕಾರಕ್ಕೆ ಸಲ್ಲಿಸಿ ಕ್ರಮವಹಿಸಲು ಅನುಮತಿ ಕೋರಿದ್ದಾರೆ. ಮುಂದಿನ
50 ವರ್ಷ ಅವಧಿಗೆ ಗುತ್ತಿಗೆ: ಮೈಸೂರು ಸಂಸ್ಥಾನದ ಅವಧಿಯಲ್ಲಿ ಅಂದರೆ 1933ರಲ್ಲಿ ಮಹಿಳೆಯರ ಪ್ರಗತಿಗಾಗಿ ಆರಂಭವಾದ ಮಹಿಳಾ ಸಂಸ್ಥೆಯು ಆರಂಭದಲ್ಲಿ ಟೇಲರಿಂಗ್, ಅಗರಬತ್ತಿ ತಯಾರಿಕೆಯಂತಹ ತರಬೇತಿ ನೀಡುತ್ತಿತ್ತು. ಆನಂತರ 1957ರಲ್ಲಿ ವಿದ್ಯಾ ಕ್ಷೇತ್ರದಲ್ಲಿ ಬಾಲಮಂದಿರ, ಶಿಶು ವಿಹಾರ ಪ್ರಾರಂಭಿಸಿ ನಂತರ ಪ್ರಾಥಮಿಕ-ಮಾಧ್ಯಮಿಕ-ಪ್ರೌಢ ಶಾಲೆ ಆರಂಭಿಸಿ, ಶಿಕ್ಷಣ ಸಂಸ್ಥೆ ನಡೆಸುತ್ತಿದೆ. ಟೌನ್ ಮುನಿಸಿಪಲ್ ಕೌನ್ಸಿಲ್‌ನ ವಿಶೇಷ ಸಭೆಯ 1959ರ ಅ.3ರ ಸಭೆ ನಡಾವಳಿಗಳ ಆಧಾರದ ಮೇಲೆ ಖಾತೆ ಸಂ.1775ರಲ್ಲಿದ್ದ 80/60 ಅಳತೆಯ ಖಾಲಿ ನಿವೇಶನವನ್ನು ವಾರ್ಷಿಕ ಕೇವಲ 6 ರೂ.ಗೆ ಬಾಡಿಗೆ ದರದಲ್ಲಿ 50 ವರ್ಷ ಅವಧಿಗೆ ಗುತ್ತಿಗೆ ನೀಡುವ ಬಗ್ಗೆ ಷರಾ ನಮೂದಿಸಿರುವುದು ದಾಖಲೆಯಿದೆ. 1999-2000ರ ವಹಿಯಲ್ಲಿ ವಾರ್ಡ್ ನಂ-12ರ ಹೊಸ ಬಡಾವಣೆಗೆ ಸೇರಿದ ಅಸೆಸ್ಟೆಂಟ್ ಪುಸ್ತದಲ್ಲಿ 371/2859/371 ಸಂಖ್ಯೆಯ ಪ್ರಕಾರ ನಗರಸಭೆಯ ಹೊಸ ಬಡಾವಣೆಯ ರಿಜಿಸ್ಟರ್‌ನಲ್ಲಿ ಮಾಲೀಕರ ಜಾಗದಲ್ಲಿ ನಗರಸಭೆ ಹಾಗೂ ಅನುಭೋಗದಾರರ ಜಾಗದಲ್ಲಿ ಮಹಿಳಾ ಸಮಾಜ ಎಂದೂ ಸ್ಪಷ್ಟವಾಗಿ ನಮೂದಾಗಿದೆ.
* ನಿಯಮ ಬಾಹಿರ ಹರಾಜು
ಶಾಲಾ ಮಕ್ಕಳ ಹಿತದೃಷ್ಟಿಯಿಂದ 2015ರ ಮಾ.30ರಂದು ನಡೆದ ಸಾಮಾನ್ಯ ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ದರದಂತೆ ಮಾಸಿಕ 21,600 ರೂ. ಬಾಡಿಗೆ ನಿಗದಿಪಡಿಸಿ 12 ವರ್ಷಕ್ಕೆ (2015 2 100 2027 ಮಾ.30ರ ವರೆಗೆ) ಮರು ಗುತ್ತಿಗೆ ನೀಡುವ ಕರಾರು ಮಾಡಿಕೊಂಡಿದ್ದಾರೆ.
ಆದರೂ ಇದು ಬಹಿರಂಗ ಹರಾಜು ಮೂಲಕ ಆಗಬೇಕಿತ್ತು, ಇದು ಸಹ ಕಾನೂನು ಬಾಹಿರವಾಗಿದ್ದು, ರದ್ದುಗೊಳಿಸಲು ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಲಾಗಿರುತ್ತದೆ. ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿ ರದ್ದುಪಡಿಸಿದಾಗ, ಸಂಸ್ಥೆಯ ಆಡಳಿತ ಮಂಡಳಿ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಸಂದರ್ಭದಲ್ಲಿ ಕೋರ್ಟ್‌ಗೆ ಸಲ್ಲಿಕೆಯಾದ ದಾಖಲೆ ಪರಿಶೀಲಿಸಿದಾಗ, 1963ರಲ್ಲೇ ಈ ಆಸ್ತಿಯನ್ನು ಮಹಿಳಾ ಸಮಾಜಕ್ಕೆ ಮಾರಾಟ ಮಾಡಲಾಗಿದೆ ಎಂಬ ನಕಲಿ ನೋಂದಣಿ ಪತ್ರ ಮತ್ತು ನಕಲಿ ಗುತ್ತಿಗೆ ಕರಾರು ಪತ್ರಗಳನ್ನು ಸೃಷ್ಟಿಸಿ ನ್ಯಾಯಾಲಯಕ್ಕೂ ತಪ್ಪು ಮಾಹಿತಿ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.
ಅಕ್ರಮವಾಗಿ 12 ವರ್ಷ ಗುತ್ತಿಗೆ ನೀಡಲು ಸಹಕರಿಸಿದ ಅಂದಿನ ಪೌರಾಯುಕ್ತ ಕೆ.ಎನ್. ಲಕ್ಷ್ಮೀನಾರಾಯಣ, ಕಂದಾಯ ಅಧಿಕಾರಿ ಸುಬ್ರಹ್ಮಣಿ, ಕಂದಾಯ ನಿರೀಕ್ಷಕ ಸುಬ್ಬಣ್ಣ, ನೋಂದಣಾಧಿಕಾರಿಗಳು ಸೇರಿಹಲವು ಅಧಿಕಾರಿಗಳು ಭಾಗಿಯಾಗಿರುವುದು ಸ್ಪಷ್ಟವಾಗಿದೆ.
ತನಿಖಾ ತಂಡದ ಅಭಿಪ್ರಾಯವೇನು..?
- ನಗರಸಭೆಯ ಆಸ್ತಿಗೆ ಅಕ್ರಮವಾಗಿ ನಕಲಿ ನೋಂದಣಿ ಪತ್ರ ಸೃಷ್ಟಿಸಿ, ನ್ಯಾಯಾಲಯಕ್ಕೆ ಅಕ್ರಮ ದಾಖಲೆ ಸಲ್ಲಿಸಿ, ನಗರಸಭೆಗೆ ವಂಚನೆ ಮಾಡಿರುವ ಮಾಹಿಳಾ ಸಮಾಜದ ಸಂಬಂಧಪಟ್ಟಿವರ ಮೇಲೆ, ಉಪ ನೋಂದಣಾಧಿಕಾರಿ ವಿರುದ್ಧ ನಗರಸಭೆಯಿಂದ ಕ್ರಿಮಿನಲ್ ಪ್ರಕರಣ ದಾಖಲಿಸಲು ಸರ್ಕಾರದ ಅನುಮತಿ ಪಡೆಯಬೇಕು.
- ಸರ್ಕಾರದ ಸುತ್ತೋಲೆಗಳಂತೆ ಬಹಿರಂಗ ಹರಾಜು ಮಾಡದೆ 12 ವರ್ಷಕ್ಕೆ ನೆಲಬಾಡಿಗೆ ನೀಡಿರುವುದು ಕಾನೂನು ಉಲ್ಲಂಘನೆ, ಜತೆಗೆ ಸೇಲ್ ಡೀಡ್ ಸಹ ನೋಂದಣಿಯಾಗಿರುವುದು.
- ನ್ಯಾಯಾಲಯದ 2023ರ ಜೂ.15ರ ಆದೇಶದಂತೆ 20150 2.100 20270 2.30 ಅವಧಿಗೆ ಸರ್ಕಾರಿಂದ ಘಟನೋತ್ತರ ಮಂಜೂರಾತಿ ಪಡೆಯಲು ನಗರಸಭೆಯಿಂದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಬೇಕೆಂದಿದ್ದು, ಈ ಪ್ರಕರಣ ಸರ್ಕಾರದ ಹಂತದಲ್ಲಿ ತೀರ್ಮಾನವಾಗಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net