ಅಗಲಕೋಟೆ ಜಮೀನು ಸರ್ವೇ ಶುರು

ಮಾಲೂರು ತಾಲೂಕಿನ ಅಗಲಕೋಟೆ ಜಮೀನಿನನ್ನು ಡಿಡಿಎಲ್​ಆರ್​ ಸಂಜಯ್​ ನೇತೃತ್ವದಲ್ಲಿ ಸೋಮವಾರ ಸರ್ವೇ ನಡೆಸಲಾಯಿತು. ರೂಪ, ಕೃಷ್ಣಪ್ಪ ಇದ್ದರು.
ಮಾಲೂರು ತಾಲೂಕಿನ ಅಗಲಕೋಟೆ ಜಮೀನಿನನ್ನು ಡಿಡಿಎಲ್​ಆರ್​ ಸಂಜಯ್​ ನೇತೃತ್ವದಲ್ಲಿ ಸೋಮವಾರ ಸರ್ವೇ ನಡೆಸಲಾಯಿತು. ರೂಪ, ಕೃಷ್ಣಪ್ಪ ಇದ್ದರು.
Published on
ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ಅಲಕೋಟೆ ಜಮೀನು ಸರ್ವೇ ಕಾರ್ಯವು ಸೋಮವಾರ ಶುರುವಾಗಿದೆ.
ಅಗಲಕೋಟೆ ಸಮೀಪದ ಜಮೀನು ಶಿಕ್ಷಣ ಇಲಾಖೆ ಧಾನ ಮಾಡಿದ್ದು, ಇದು ಭೂಗಳ್ಳರ ಪಾಲಾಗಿದೆ ಎಂದು ಆರೋಪಿಸಿ ಮಾಜಿ ಶಾಸಕ ಕೆ.ಎಸ್​.ಮಂಜುನಾಥ್​ ಗೌಡ ತನಿಖೆಗೆ ಒತ್ತಾಯಿಸಿದ್ದರು. ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಸೇರಿದಂತೆ ಹಲವರಿಗೆ ದೂರು ನೀಡಿದ್ದರು. ಇದರ ಜತೆಗೆ ಶಾಸಕ ಕೆ.ವೈ.ನಂಜೇಗೌಡ ಅವರು ಸಹ ಅಕ್ರಮ ಎಸಗಿರುವವರ ವಿರುದ್ಧ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಇತರೆ ಸರ್ಕಾರಿ ಜಾಗವು ಒತ್ತುವರಿ ಆಗಿರುವ ಬಗ್ಗೆ ಸಾರ್ವಜನಿಕರ ಸಹ ದೂರು ನೀಡಿದ್ದರು.
ಸ್ಮಶಾನ, ಗುಂಡುತೋಪು, ಗೋಮಾಳ, ರಾಜಕಾಲುವೆ ಜಾಗಗಳನ್ನು ಸಹ ಉದ್ಯಮಿಯೋರ್ವ ಒತ್ತುವರಿ ಮಾಡಿಕೊಂಡಿದ್ದಾರೆ. ಶಿಕ್ಷಣ ಇಲಾಖೆಗೆ ಧಾನವಾಗಿ ರಾಜ್ಯಪಾಲಕ ಹೆಸರಿನಲ್ಲಿ ಇರುವುದಕ್ಕೆ ದಾಖಲೆಗಳನ್ನು ಸಹ ಸಲ್ಲಿದ್ದರು. ಆದರೆ ಇದು ಒಂದು ರೀತಿ ಮಾಲೂರು ಕ್ಷೇತ್ರದಲ್ಲಿ ರಾಜಕೀಯ ಜಿದ್ದಿಗೆ ಕಾರಣವಾಗಿತ್ತು. ಒಬ್ಬರ ಮೇಲೊಬ್ಬರ ಆರೋಪ ಪ್ರತ್ಯಾರೋಪ ಮಾಡಿಕೊಕೊಳ್ಳುತ್ತಿದದ್ದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಅಗಲಕೋಟೆ ಗ್ರಾಮದ ಎಲ್ಲಾ ಸರ್ವೇ ನಂಬರ್​ಗಳ ಜಮೀನು, ಕೆರೆ, ಕುಂಟೆ, ರಾಜಕಾಲುವೆ, ಕಾಲುದಾಗಿ, ಬಂಡಿದಾರಿ, ಸ್ಮಶಾನ, ಗ್ರಾಮಠಾಣ, ಗುಂಡುತೋಪು, ಅಳತೆ ಮಾಡಿ, ಹದ್ದು ಬಸ್ತು ಗುರುತಿಸಿ, ಒತ್ತುವರಿ ಗುರುತಿಸಲು ನಿನಾಂಕ ನಿಗಧಿಪಡಿಸಲಾಗಿತ್ತು.
ಮೇಲಧಿಕಾರಿಗಳ ಆದೇಶದಂತೆ ಸೋಮವಾರ ಡಿಡಿಎಲ್​ಆರ್​ ಸಂಜಯ್​, ತಹಶೀಲ್ದಾರ್​ ರೂಪ ನೇತೃತ್ವದಲ್ಲಿ ಸರ್ವೇ ಪ್ರಾರಂಭವಾಗಿದ್ದು, ಮುಂದುವರೆದಿದೆ.
ಸರ್ವೇ ಸಂಬಂಧ ಎಡಿಎಲ್​ಆರ್​, ತಾ.ಪಂ ಇಒ, ಮಾಸ್ತಿ ಪೊಲೀಸರು, ರಾಜಸ್ವ ನಿರೀಕ್ಷಕ, ತಾಲೂಕು ಭೂ ಮಾಪಕರು, ಪಹಣಿದಾರರು, ಗ್ರಾಮ ಪಂಚಾಯಿತಿ ಅಧಿಕಾರಿಗಳಿಗಳಿಗೆ ಅಧಿಕೃತ ಜ್ಞಾನಪನ ಪತ್ರ ನೀಡಿದ್ದು, ಮೂರು ದಿನಗಳಲ್ಲಿ ವರದಿ ಸಿದ್ದ ಪಡಿಸಲು ಅಧಿಕಾರಿಗಳು ಕ್ರಮವಹಿಸಿದ್ದಾರೆ.
* ಬಿಗಿ ಪೊಲೀಸ್​ ಬಂದೋಸ್ತ್​
ಸದರಿ ಪ್ರಕರಣವು ರಾಜಕೀಯ ಜಿದ್ದಿಗೆ ಕಾರಣವಾಗಿರುವುದರಿಂದ ಜಮೀನಿಗೆ ಸಂಬಂಧವಿಲ್ಲದವರು ಪ್ರವೇಶ ಮಾಡುವ ಸಾಧ್ಯತೆ ಇರುತ್ತದೆ ಎಂದು ಪೊಲೀಸರು ಯಾವುದೇ ರೀತಿ ಅಹಿತಕರ ಟನೆಗಳಿಗೆ ಅಸ್ಪದ ನೀಡದೆ ಬಿಗಿ ಪೊಲೀಸ್​ ಬಂದೋಬಸ್ತ್​ ವ್ಯವಸ್ಥೆ ಮಾಡಲಾಗಿತ್ತು.
ಜಮೀನುಗೊಳಗೆ ಯಾರು ಸೂಚಿತ ಇಲಾಖಾಧಿಕಾರಿಗಳು, ವ್ಯಕ್ತಿಗಳು ಬಿಟ್ಟರೆ ಖಾಸಗಿ ವ್ಯಕ್ತಿಗಳು ಬಾರದಂತೆ ಬ್ಯಾರಿಕೇಡ್​ ನಿರ್ಮಿಸಿ, ಪೊಲೀಸರನ್ನು ನಿಯೋಜಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net