ಕೋಟ್ಯಂತರ ಹಣ ಪಡೆದು ವಂಚನೆ ಆರೋಪ

ಕೋಲಾರ ನಗರದ ಶ್ರೀಕಾಳಿದೇವಿ ಎಂಟರ್​ ಪೆಸಸ್​ನ ಸಿಬ್ಬಂದಿ ರಮ್ಯ ಅವರನ್ನು ತರಾಟೆಗೆ ತೆಗೆದುಕೊಂಡ ವಂಚನೆಗೆ ಒಳಗಾದವರು.
ಕೋಲಾರ ನಗರದ ಶ್ರೀಕಾಳಿದೇವಿ ಎಂಟರ್​ ಪೆಸಸ್​ನ ಸಿಬ್ಬಂದಿ ರಮ್ಯ ಅವರನ್ನು ತರಾಟೆಗೆ ತೆಗೆದುಕೊಂಡ ವಂಚನೆಗೆ ಒಳಗಾದವರು.
Published on
ಕೋಲಾರ: ಕಟ್ಟಿದ ಹಣಕ್ಕಿಂತ ಹೆಚ್ಚುವರಿಯಾಗಿ ಹಿಂದುರುಗಿಸುವುದಾಗಿ ಹೇಳಿ ಬಡವರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಘಟನೆ, ನಗರದ ಪಾಲಸಂದ್ರ ಬಡಾವಣೆಯಲ್ಲಿ ಶುಕ್ರವಾರ ಜರುಗಿದೆ.
ಬೆಂಗಳೂರಿನ ಅರತಿ ಎಂಬುವರು ಕೋಲಾರದಲ್ಲಿ ಶ್ರೀ ಕಾಳಿದೇವಿ ಎಂಟರ್​ ಪ್ರೈಸಸ್​ ಕಟ್ಟಿಕೊಂಡು, ಅಗರಬತ್ತಿ, ಊಟದ ಎಲೆ, ಕರ್ಪೂರ ಹೀಗೆ ಮನೆಯಲ್ಲೆ ತಯಾರಿಸಬಲ್ಲ ಕಚ್ಚ ವಸ್ತುಗಳನ್ನು ನೀಡುತ್ತಿದ್ದರು. ಪ್ರತಿ ತಿಂಗಳು ತಯಾರಿಸಿದ್ದ ವಸ್ತುಗಳು ಸಂಸ್ಥೆಯ ಸಿಬ್ಬಂದಿ ಹಣಪಟ್ಟಿದವರ ಮನೆ ಬಳಿಗೆ ಹೋಗಿ ಸಂಗ್ರಹಿಸಿ ತರುತ್ತಿದ್ದರು. ಪ್ರತಿ ತಿಂಗಳು ಕಟ್ಟಿದ ಹಣಕ್ಕೆ ಶೇಖಡವಾರು ಹಣ ಸಹ ನೀಡುತ್ತಿದ್ದರು.
ಕಳೆದ ಒಂದು ವರ್ಷದ ಹಿಂದೆ ಪಾಲಸಂದ್ರ ಬಡಾವಣೆಯಲ್ಲಿ ಕಚೇರಿ ಪ್ರಾರಂಭಿಸಿರುವ ಖಾಸಗಿ ಸಂಸ್ಥೆಯವರು, ಸಿಬ್ಬಂದಿಯನ್ನು ಸಹ ನೇಮಿಸಿಕೊಂಡಿದ್ದಾರೆ. ಸುಮಾರು 2,530 ಮಂದಿಯಿಂದ ಕನಿಷ್ಠ 50 ಸಾವಿರ ದಿಂದ 10 ಲಕ್ಷದ ತನಕ ಠೇವಣಿ ಕಟ್ಟಿಸಿಕೊಂಡಿದ್ದಾರೆ. ಸಂಸ್ಥೆಯ ಕಾರ್ಯಚಟುವಟಿಕೆ ಬಗ್ಗೆ ಫೇಸ್ ಬುಕ್​, ವ್ಯಾಟ್ಸಪ್​, ಇನ್ಸ್​ಸ್ಟಾಗ್ರಾಮ್​ನಲ್ಲಿ ಹರಿ ಬಿಟ್ಟಿದ್ದು, ವರ್ಕ್ ಫ್ರಮ್ ಹೋಂ ಕೆಲ, ಲಕ್ಷಲಕ್ಷ ಸಂಬಳ ಪಡೆದುಕೊಳ್ಳಿ ಎಂದು ನಾಗರಿಕರನ್ನು ಹುಚ್ಚೆಬ್ಬಿಸಿದ್ದಾರೆ.
ರೀಲ್ಸ್​ ನೋಡಿ ಮರುಳಾದ ಕೆಲ ಮಹಿಳೆಯರು, ಕೂಲಿ ಕಾರ್ಮಿಕರು ಹಣವನ್ನು ತಂದು ಸಂಸ್ಥೆಗೆ ಕಟ್ಟಿದ್ದಾರೆ. ಇದಕ್ಕೆ ಅವರು ಕಾರರು ಪತ್ರ ಪಡೆದುಕೊಂಡಿದ್ದು, ವ್ಯವಹಾರಕ್ಕೆ ಗ್ಯಾರೆಂಟಿ ನೀಡಿದ್ದಾರೆ. ಈ ಸಂಸ್ಥೆಯೂ ಸರ್ಕಾರದಿಂದ ಮಾನ್ಯತೆ ಪಡೆದುಕೊಂಡಿದ್ದು ನಿರುದ್ಯೋಗಸ್ಥರಿಗೆ ಕೆಲಸ ನೀಡುವುದು ಮುಖ್ಯ ಉದ್ದೇಶವಾಗಿದೆ ಎಂದು ಬಂದವರನ್ನು ಯಾಮಾರಿಸಿದ್ದಾರೆ. ಇದನ್ನು ನಂಬಿ ಹಣ ಪಾವತಿ ಮಾಡಿದವರನ್ನು ಸಂಸ್ಥೆಯ ಮಾಲೀಕ ಅರತಿ ವಂಚಿಸಿ ತಲೆ ಮರಿಸಿಕೊಂಡಿದ್ದಾರೆ.
ಕಳೆದ ನಾಲ್ಕೆ$ದು ದಿನಗಳಿಂದ ಕಟ್ಟಿರುವ ಹಣವನ್ನು ವಾಪಸ್​ ನೀಡುವಂತೆ ಕೆಲ ಮಹಿಳೆಯರು ಸಿಬ್ಬಂದಿಯನ್ನು ಒತ್ತಾಯಿಸಿದ್ದು, ದಿನಗಳನ್ನು ತಳ್ಳಿಕೊಂಡು ಹೋಗುತ್ತಿದ್ದರು. ಇದರಿಂದ ಅನುಮಾನಗೊಂಡ ಹಣ ಪಾವತಿದಾರರು ಪ್ರತಿಭಟನೆ ನಡೆಸಲು ಯತ್ನಿಸಿದರು, ಮಾಹಿತಿ ತಿಳಿದ ಗಲ್​ಪೇಟೆ ಪೊಲಿಸರು ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ತಿಳಿಸಿಗೊಳಿಸಿದರು, ವಂಚನೆಗೆ ಒಳದಾವರು ದೂರು ನೀಡಿದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೆ ಸ್ಪಂದಿಸಿದ ಪ್ರತಿಭಟನಾಕಾರರು ಠಾಣೆಗೆ ಭೇಟಿ ನೀಡಿ ಆಗಿರುವ ಮೋಸದ ಬಗ್ಗೆ ದೂರು ನೀಡಲು ಮುಂದಾದರು, ಆದರೆ ಪೊಲೀಸರು ದೂರನ್ನು ಸ್ವೀಕರಿಸದೆ ವಾಪಸ್​ ಕಳುಹಿಸಲು ಯತ್ನಿಸಿದರು. ಆನಂತರ ದೂರು ಸ್ವೀಕರಿಸಿದ್ದಾರೆ.
ಇನ್ನು ಮಾಲೂರು, ಬೂದಿಕೋಟೆ ಭಾಗದಲ್ಲೂ ಶಾಖೆಗಳನ್ನು ಹೊಂದಿದ್ದು ಅಲ್ಲೂ ಸಹ ಇದೇ ಪರಿಸ್ಥಿತಿ ಎದುರಾಗಿದೆ. ಇನ್ನು ಇವರ ಕೇಂದ್ರ ಕಚೇರಿಯೂ ಬೆಂಗಳೂರಿನ ಚಿಕ್ಕಜಾಲದಲ್ಲಿದ್ದು, ಕೆಲವರು ಅಲ್ಲಿಗೂ ಹೋಗಲು ಸಿದ್ದರಾದರು. ಆದರೆ ಡಿಎಸ್​ಎಸ್​ ಮುಖಂಡನೋರ್ವ ಮಧ್ಯ ಪ್ರವೇಶ ಮಾಡಿ ಅವರನ್ನು ತಡೆದಿದ್ದು ಅನುವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತು. ಪ್ರತಿಭಟನೆಯ ವೇಳೆ ಸಿಬ್ಬಂದಿಯ ಪರವಹಿಸಿಕೊಂಡು ಮಾತನಾಡಿದ್ದರಿಂದ ಮಹಿಳೆಯರು ಆ ಮುಖಂಡನನ್ನು ತರಾಟೆಗೆ ತೆಗೆದುಕೊಂಡ ಹಿನ್ನಲೆಯಲ್ಲಿ ಸ್ಥಳದಿಂದ ಕಾಲ್ಕಿತ.
* ಹೋರಾಟದ ಎಚ್ಚರಿಕೆ
ಕರವೇ ಜಿಲ್ಲಾಧ್ಯಕ್ಷ ಮೇಡಿಹಾಳ ರಾವೇಂದ್ರ ಮಾತನಾಡಿ, ಜನರನ್ನು ವಂಚನೆ ಮಾಡುವ ಸಂಸ್ಥೆಗಳು ನಗರದಲ್ಲಿ ಅಗಾಗ ತಲೆಯೆತ್ತುತ್ತಿವೆ. ಹೊರಗಿನಿಂದ ಬಂದ ವ್ಯಕ್ತಿಗಳು ಸ್ಥಳಿಯರ ಬಳಿ ಹಣ ಕಟ್ಟಿಸಿಕೊಂಡು ಬೆಂಗಳೂರಿನ ಅರತಿ ಎಂಬುವರು ಪರಾರಿಯಾಗಿದ್ದಾರೆ. ಅವರ ವಿರುದ್ಧ ಪೊಲೀಸರು ದೂರು ದಾಖಲಿಸಿ ಅನ್ಯಾಯಕ್ಕೆ ಒಳಾದವರಿಗೆ ನ್ಯಾಯ ದೊರಕಿಸಬೇಕು, ಇಲ್ಲದಿದ್ದರೆ ವೇದಿಕೆಯಿಂದ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
* ಮಹಿಳೆಯರೆ ಸಂಸ್ಥೆಯ ಗುರಿ
ವಂಚನೆಗೆ ಒಳಗಾಗಿರುವ ಲಕ್ಷ$್ಮಣ್​ ಮಾತನಾಡಿ, ಕಾಂಳಿಕದೇವಿ ಎಂಟರ್​ ಪೆಸಸ್​ನವರು ಮಹಿಳೆಯರನ್ನು ಮರಳು ಮಾಡಿ ಹಣ ಕಟ್ಟಿಸಿಕೊಂಡು ಅಗರಬತ್ತಿ, ಪೇಪರ್​ ಪ್ಲೇಟ್​ ಸೇರಿದಂತೆ ಇತರೆ ವಸ್ತುಗಳನ್ನು ತಯಾರಿಸಿಕೊಟ್ಟರೆ ಹೆಚ್ಚುವರಿ ಹಣ ಕೊಟ್ಟು ತೆಗೆದುಕೊಳ್ಳುವುದಾಗಿ ರಮ್ಯ ಎಂಬಾಕೆ ಹಣ ಪಡೆದುಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಿದರು.
ಕಟ್ಟಿರುವ ಹಣವನ್ನು ವಾಪಸ್​ ಕೇಳಲು ಕಚೇರಿಗೆ ಹೋದರೆ ದಿನಗಳನ್ನು ತಳ್ಳಿಕೊಂಡು ಬಂದಿದ್ದಾರೆ. ಆ ಕಚೇರಿ ಸಿಬ್ಬಂದಿಗೆ ವೇತನ ಆಗದಿದ್ದರು ಪರವಾಗಿಲ್ಲ, ಬಡ ಹೆಣ್ಣು ಮಕ್ಕಳ ಹಣ ವಾಪಸ್​ ಬರಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net