ತಲೆಮರಿಸಿಕೊಂಡಿದ್ದ ಆರೋಪಿ ಬಂಧನ

ಬಲಗೆ ಪ್ರಕರಣದ ಸಂಬಂಧ ಆರೋಪಿ ಮುರಳಿ ಪ್ರಸಾದ್​ನನ್ನು ಕೋಲಾರ ನಗರಸಭೆ ಪೊಲೀಸರು ಬಂಧಿಸಿದ್ದಾರೆ. ಶೇಖರ್​, ನವೀನ್​ ಇದ್ದರು.
ಬಲಗೆ ಪ್ರಕರಣದ ಸಂಬಂಧ ಆರೋಪಿ ಮುರಳಿ ಪ್ರಸಾದ್​ನನ್ನು ಕೋಲಾರ ನಗರಸಭೆ ಪೊಲೀಸರು ಬಂಧಿಸಿದ್ದಾರೆ. ಶೇಖರ್​, ನವೀನ್​ ಇದ್ದರು.
Published on
ಕೋಲಾರ: ಗಲಬೆ ಪ್ರಕರಣ ಸಂಬಂಧದ 15 ವರ್ಷಗಳಿಂದ ಆರೋಪಿಯನ್ನು ನಗರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಗರದ ಮುನೇಶ್ವರ ನಗರದ ನಿವಾಸಿ ಮುರಳಿ ಪ್ರಸಾದ್​ (44) ಬಂಧಿತ ವ್ಯಕ್ತಿಯಾಗಿದ್ದಾನೆ. ಬಡಾವಣೆಯಲ್ಲಿ 201ರಲ್ಲಿ ನಡೆದಿದ್ದ ಗಲಬೆ ಪ್ರಕರಣದಲ್ಲಿ ಭಾಗಿಯಾಗಿ, ತಲೆ ಮರಿಸಿಕೊಂಡಿದ್ದ. ಈತ ಜರ್ಮನಿಗೆ ಹೋಗಿ ಅಕ್ಕಿ ವ್ಯಾಪಾರ ಮಾಡಿಕೊಂಡಿದ್ದು, ಇತ್ತೀಚಿಗೆ ಕೋಲಾರಕ್ಕೆ ಆಗಮಿಸಿದ್ದ.
ಬೇರೊಂದು ಪ್ರಕರಣದ ಆರೋಪಿಗಳನ್ನು ಹುಡಿಕೊಂಡು ನಗರ ಠಾಣೆ ಎಂ.ಶೇಖರ್​, ನವೀನ್​ ಕುಮಾರ್​ ಮುನೇಶ್ವರ ನಗರಕ್ಕೆ ತೆರಳಿದ್ದಾರೆ. ಆಗ ಮುರಳಿ ಪ್ರಸಾದ್​ ಇದಿದ್ದು ಗೊತ್ತಾಗಿ ಬಂಧಿಸಿಕೊಂಡು ಬಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ನಗರ ಠಾಣೆಯ ಸಿಬ್ಬಂದಿ ಕಾರ್ಯವೈಖರಿಗೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net