ಜಿಲ್ಲೆಯಾದ್ಯಂತ 19 ಸಾವಿರ ಹೆಕ್ಟೇರ್‌ನಲ್ಲಿ ಹಿಪ್ಪು ನೇರಳೆ ಬೆಳೆದಿದ್ದು, 20 ಸಾವಿರಕ್ಕೂ ಹೆಚ್ಚು ಬೆಳೆಗಾರರಿದ್ದಾರೆ. ಕೋಲಾರ, ಬಂಗಾರಪೇಟೆ, ಮುಳಬಾಗಿಲು, ಶ್ರೀನಿವಾರಪುರ, ಕೆಜಿಎಫ್, ಮಾಲೂರಿನ ಬಹುತೇಕ ರೈತರು ಪ್ರಮುಖವಾಗಿ ಮಿಶ್ರತಳಿ, ದ್ವಿತಳಿ ಗೂಡು ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದರೂ ಉತ್ಪಾದನೆ ಕೊರತೆಯಿಂದ ಬಂಡವಾಳ ಗಿಟ್ಟಿಸಿಕೊಳ್ಳುವುದೂ ಸವಾಲಾಗಿದೆ. ಕೋಲಾರ ಮಾರುಕಟ್ಟೆಗೆ ಒಂದು ದಿನಕ್ಕೆ ದ್ವಿತಳಿ ಗೂಡು 700 ಕೆಜಿಗೂ ಅಧಿಕ ಅವಕವಾಗುತ್ತಿದ್ದು, ಸರಾಸರಿ ಕೆಜಿಗೆ 650 ರೂ. ಹಾಗೂ ಮಿಶ್ರ ತಳಿ 7000 ಕೆಜಿಗೂ ಅಧಿಕ ಆವಕವಾಗುತ್ತಿದ್ದು, ಸರಾಸರಿ ಕೆಜಿಗೆ 550 ರೂ.ಗೆ ಮಾರಾಟವಾಗುತ್ತಿದೆ. ಕಳೆದ ದಿನಗಳಿಗೆ ಹೊಲಿಸಿದರೆ 2 ವಾರಗಳಿಂದ ಗೂಡಿನ ದರದಲ್ಲೂ ಕುಸಿತ ಕಂಡಿದೆ.