ಜೀವಕ್ಕೆ ಕಟಂಕವಾದ ಮ್ಯಾನ್​ಹೋಲ್​!

ಕೋಲಾರ ನಗರದ ಎಸ್​ಎನ್​ಆರ್​ ಸಮೀಪದ ರಸ್ತೆಯಲ್ಲಿ ಯುಜಿಡಿ ಮುಚ್ಚಳ ಹಾನಿಯಾಗಿದ್ದು, ಬ್ಯಾರಿಕೇಡ್​ ಅಡ್ಡಲಾಗಿ ಇಟ್ಟಿರುವುದು.
ಕೋಲಾರ ನಗರದ ಎಸ್​ಎನ್​ಆರ್​ ಸಮೀಪದ ರಸ್ತೆಯಲ್ಲಿ ಯುಜಿಡಿ ಮುಚ್ಚಳ ಹಾನಿಯಾಗಿದ್ದು, ಬ್ಯಾರಿಕೇಡ್​ ಅಡ್ಡಲಾಗಿ ಇಟ್ಟಿರುವುದು.
Published on
ಕಿರುವಾರ ಎಸ್​.ಸುದರ್ಶನ್​ ಕೋಲಾರ
ನಗರದ ಬಹುತೇಕ ಕಡೆ ಯುಜಿಡಿ ಮ್ಯಾನ್​ ಹೋಲ್​ಗಳ ಅಸಮರ್ಪಕ ನಿರ್ವಹಣೆಯಿಂದ ಮುಚ್ಚಳಗಳು ಹಾನಿಯಾಗಿದ್ದು, ಅಪಾಯಕಾರಿ ಸ್ಥಿತಿ ತಲುಪಿ ಸಾರ್ವಜನಿಕರ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ.
ಕೋಲಾರ ನಗರ ಸಭೆ ವ್ಯಾಪ್ತಿಯಲ್ಲಿ 35 ವಾರ್ಡ್​ಗಳಿವೆ. ನಗರದ ಹಲವು ಬಡಾವಣೆಗಳಲ್ಲಿ ಅವೈಜ್ಞಾನಿಕವಾಗಿ ನಡು ರಸ್ತೆಯಲ್ಲೇ ನಿರ್ಮಾಣ ಮಾಡಿರುವ ಮ್ಯಾನ್​ಹೋಲ್​ಗಳು ನಿರ್ವಹಣೆಯ ಕೊರತೆಯಿಂದ ಶಿಥಿಲಗೊಂಡಿವೆ. ಇನ್ನು ಕೆಲ ಕಡೆ ಕಳಪೆ ಕಾಮಗಾರಿ ಮಾಡಿದ್ದು ಯುಜಿಡಿ ಹಾನಿಗೆ ಕಾರಣವಾಗಿ ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ನಗರದ ಎಸ್​ಎನ್​ಆರ್​ ಆಸ್ಪತ್ರೆ ಸಮೀಪ ಮ್ಯಾನ್​ಹೋಲ್​ ಮುಚ್ಚ ಹಾನಿಯಾಗಿ ಒಂದು ವಾರವೇ ಕಳೆದಿದೆ. ಇದಕ್ಕೆ ಬ್ಯಾರಿಕೇಡನ್ನು ಅಡ್ಡಲಾಗಿ ಇಡಲಾಗಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ.
ಕ್ಲಾಕ್​ ಟವರ್​ರಿಂದ ಸಂಚಾರಿ ಪೊಲೀಸ್​ ಠಾಣೆ ತನಕ ರಸ್ತೆಯಲ್ಲಿ ಯುಜಿಡಿ ಮುಚ್ಚಳಗಳು ಸಂಪೂರ್ಣವಾಗಿ ಹಾನಿಯಾಗಿದ್ದು, ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಗೋಚರಿಸುವುದಿಲ್ಲ. ಈಗಾಗಲೇ ಸಾಕಷ್ಟು ಬಂದಿ ದ್ವಿಚಕ್ರ ವಾಹನ ಸವಾರರು ಅಯತಪ್ಪಿ ಬಿದ್ದು ಗಾಯಗೊಂಡಿರುವ ಟನೆ ಸಂಭವಿಸಿದೆ.
ುಡ್​ಕೋರ್ಟ್​ ಸಮೀಪವು ರಸ್ತೆ ಮಧ್ಯೆದಲ್ಲಿ ದೊಡ್ಡ ಗಾತ್ರದ ಗುಂಡಿ ಬಿದ್ದಿದ್ದು ಕಟ್ಟಡ ತ್ಯಾಜ್ಯವನ್ನು ತಂದು ಸುರಿಯಲಾಗಿದೆ. ಜತೆಗೆ ಬ್ಯಾರಿಕೇಡ್​ ಅಡ್ಡಲಾಗಿ ಇಡಲಾಗಿದೆ. ಹಾನಿಯಾಗಿರುವ ಮ್ಯಾನ್​ಹೋಲ್​ಗಳಲ್ಲಿ ಸರಿಪಡಿಸದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
* ಇಂಜನಿಯರ್​ಗಳ ಉದಾಸೀನ
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಇಲಾಖೆ ವತಿಯಿಂದ ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ಒಳ ಚರಂಡಿ ಕೊಳವೆ ಮಾರ್ಗವನ್ನು ನಿರ್ಮಾಣ ಕುರಿತು ಕ್ರಿಯಾಯೋಜನೆ ತಯಾರಿಸಿ ಅದಕ್ಕೆ ಅನುಮೋಧನೆ ಪಡೆದು ಟೆಂಡರ್​ ಕರೆದು ಕಾಮಗಾರಿ ನಿರ್ವಹಣೆ ಜವಾಬ್ದಾರಿ ಹೊಂದುತ್ತಾರೆ.
ನಗರ ಭಾಗದಲ್ಲಿ ಗುಜರಾತಿನ ಗುತ್ತಿಗೆ ಸಂಸ್ಥೆಯವರು ಟೆಂಡರ್​ ಪರೆದು ಯಜಿಡಿ ನಿರ್ಮಾಣ ಮಾಡಿದ್ದಾರೆ. ಕಾಮಗಾರಿ ಸಮಯದಲ್ಲಿ ಸಂಬಂಧಪಟ್ಟ ಇಲಾಖೆಯ ಇಂಜನಿಯರ್​ಗಳು ಪರಿಶೀಲನೆ ನಡೆಸದೆ ಇರುವುದು ಅನಾಹುತಗಳಿಗೆ ಕಾರಣವಾಗಿದೆ.
ಮ್ಯಾನ್​ಹೋಲ್​ಗಳ ನಿರ್ಮಾಣದ ಕೆಲವೇ ದಿನಗಳಿಗೆ ಹಾನಿಯಾಗಿವೆ. ಒಳಚರಂಡಿ ಮಾರ್ಗದಲ್ಲಿ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಕಾಮಗಾರಿಯನ್ನು ಕಳಪೆ ಮಾಡಿದ್ದಾರೆ ಎಂದು ಹಿಂದೆ ನಗರಸಭೆಯ ಕೆಲ ಸದಸ್ಯರು ಆರೋಪಿಸಿ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ದೂರು ನೀಡಿದ್ದರು ಸಹ ಕ್ರಮಕ್ಕೆ ಅಧಿಕಾರಿಗಳು ಮಾತ್ರ ಮುಂದಾಗಿಲ್ಲ.
* ಸಿಬ್ಬಂದಿ ನಿರ್ಲಕ್ಷ್ಯ
ಯುಜಿಡಿ ನಿರ್ವಹಣೆಗಾಗಿ ನಗರಸಭೆಯಿಂದ ಪ್ರತ್ಯೇಕ ಸಿಬ್ಬಂದಿ, ಜಟ್ಟಿಂಗ್​, ಸಕ್ಕಿಂಗ್​ ಯಂತ್ರಗಳಿವೆ. ಇದಕ್ಕೆ ವರ್ಷಕ್ಕೆ ಲಾಂತರ ರೂ ಹಣ ಸಹ ವೆಚ್ಚ ಮಾಡಲಾಗುತ್ತಿದೆ. ಹಾನಿಯಾಗಿರುವ ಮ್ಯಾನ್​ಹೋಲ್​ ಹಾಗೂ ಪೈಪ್​ನ್ನು ತಕ್ಷಣಕ್ಕೆ ರಿಪೇರಿ ಮಾಡಿಸಿದರು ಸಹ ವೆಚ್ಚ ಮೀರಿ ಹಣ ಡ್ರಾ ಮಾಡುತ್ತಾರೆ, ಆದರೆ ಆ ರಿಪೇರಿ ಕೆಲಸವು ಸಹ ಕಳಪೆಯಿಂದ ಕೂಡಿರುತ್ತದೆ. ಇದಕ್ಕೆಲ್ಲ ಆರೋಗ್ಯ ನಿರೀಕ್ಷಕರ, ಇಂಜನಿಯರ್​ಗಳ ಉದಾಸೀನವೇ ಕಾರಣವಾಗಿದೆ.
ಯುಜಿಡಿಯಿಂದ ತ್ಯಾಜ್ಯ ನೀರು ಹೊರ ಬರುತ್ತಿರುವ ಬಗ್ಗೆ ನಗರಸಭೆ ಸಿಬ್ಬಂದಿಗೆ ತಿಳಿಸಲು ದೂರವಾಣಿ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಇನ್ನು ವ್ಯಾಟ್ಸಪ್​ ಸಂದೇಶ ಕಳುಹಿಸಿದರು ನೋಡಿ ಸುಮ್ಮನಿರುತ್ತಾರೆ. ಸಮಸ್ಯೆ ಇತ್ಯರ್ಥಪಡಿಸಲು ಮುಂದಾಗುವುದಿಲ್ಲ ಎಂಬ ಆರೋಪ ಕೇಳಿ ಬಂದಿದೆ.
* ಹೋಟೆಲ್​ಗಳಿಂದ ಯುಜಿಗೆ ತ್ಯಾಜ್ಯ
ಸಸ್ಯ ಹಾಗೂ ಮಾಂಸಹಾರಿ ಹೋಟೆಲ್​ಗಳವರು ಹೋಟೆಲ್​ ತ್ಯಾಜ್ಯ, ಪ್ಲಾಸ್ಟಿಕ್​ ಬಿಡುವುದರಿಂದ ಒಳ ಚರಂಡಿಯಲ್ಲಿ ತ್ಯಾಜ್ಯ ತುಂಬಿ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತದೆ.
ಈ ಬಗ್ಗೆ ಮಾಲೀಕರ ಗಮನಕ್ಕೆ ಇದ್ದರು ಸಹ ಪದೇ ಪದೇ ತ್ಯಾಜ್ಯವನ್ನು ಬಿಟ್ಟು ಯುಜಿಡಿ ಹಾನಿಯಾಗಲು ಕಾರಣರಾಗುತ್ತಿದ್ದಾರೆ. ಈ ಬಗ್ಗೆ ನಗರಸಭೆಯಿಂದ ಹಲವು ಭಾರಿ ತಿಳಿ ಹೇಳಿದ್ದರು ಸಹ ತಪು$್ಪ ಎಸಗುತ್ತಿದ್ದಾರೆ.
* ಭಾರಿ ಗಾತ್ರದ ವಾಹನಗಳಿಂದ ಅನಾಹುತ
ನಗರ ಭಾಗದಲ್ಲಿ ನಿರ್ಮಾಣ ಮಾಡಲಾಗಿರುವ ರಸ್ತೆಗಳಲ್ಲಿ ಮೀತಿ ಭಾರ ಇರುವ ವಾಹನಗಳು ಚಲಿಸಬೇಕು ಎಂಬ ನಿಯಮವಿದೆ. ಆದರೆ ಮಿತಿ ಮೀರಿ ಭಾರ ಹೊತ್ತಿರುವ ಲಾರಿ, ಸರಕು ಸಾಗಾಣೆ ವಾಹನಗಳು ಸಂಚರಿಸುವುದರಿಂದ ಮ್ಯಾನ್​ಹೋಲ್​ಗಳು ಹಾನಿಯಾಗುತ್ತಿವೆ.
ನಗರದೊಳಗೆ ಭಾರಿ ಗಾತ್ರದ ವಾಹನಗಳು ಬರುವುದನ್ನು ತಡೆದು ಹೊರ ರಸ್ತೆಗಳಲ್ಲಿ ಸಂಚರಿಸುವಂತೆ ನಿರ್ದೇಶಿಸಬೇಕಾಗಿದೆ.
ಕೋಟ್​...
ಯುಜಿಡಿ ನಿರ್ವಹಣೆ ಎಂಬುದು ನಿತರಂತ. ಸಾರ್ವಜನಿಕರು ರ್ನಿಧಿಷ್ಟ ಮಾಹಿತಿ ನೀಡಿದರೆ ಕೂಡಲೇ ಸರಿಪಡಿಸಿಕೊಡಲಾಗುವುದು. ಬಹಳ ವರ್ಷಗಳ ಹಿಂದೆ ಕಡಿಮೆ ವಿನ್ಯಾಸದ ಪೈಪ್​ ಅಳವಡಿಸಿರುವುದು ಸಮಸ್ಯೆಯಾಗುತ್ತಿದೆ. ಆದರು ಸಹ ಆದ್ಯತೆ ಮೇರೆಗೆ ಸಮಸ್ಯೆ ಬಗೆಹರಿಸಲಾಗುತ್ತಿದೆ.
- ನವೀನ್​ ಚಂದ್ರ, ಪೌರಾಯುಕ್ತ, ಕೋಲಾರ
ಕೋಟ್​..
ಹಳೇ ಕೋಲಾರ ಭಾಗದ ಬಹುತೇಕ ಬಡಾವಣೆಗಳಲ್ಲಿ ಯುಜಿಡಿ ನಿರ್ಮಾಣ ಆಗಿಲ್ಲ, ಆದರೂ ಸಹ ತೆರಿಗೆ ವಸೂಲು ಮಾಡಲಾಗುತ್ತಿದೆ. ಇದರಿಂದ ಸಂಬಂಧಪಟ್ಟ ಇಲಾಖಾಧಿಕಾರಿಗಳು ಆದಷ್ಟು ಬೇಗ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು.
- ವಿಶ್ವಾನಾಥ್​ ಗೌಡ, ಕಾರಂಜಿಕಟ್ಟೆ ನಿವಾಸಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net