

ಕೋಲಾರ: ಬೆಂಗಳೂರು ಉತ್ತರ ವಿವಿ ಆಶ್ರಯದಲ್ಲಿ ಕೆಜಿಎಫ್ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಅಂತರ ಕಾಲೇಜು ಮಹಿಳಾ ವಾಲಿಬಾಲ್ ಪಂದ್ಯಾವಳಿಯಲ್ಲಿ ನಗರದ ಸರ್ಕಾರಿ ಮಹಿಳಾ ಕಾಲೇಜು ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.
ತಂಡದ ವಿದ್ಯಾರ್ಥಿನಿಯರಾದ ಎಸ್.ತೇಜಶ್ರೀ, ತಂಡದ ನಾಯಕಿ ವಿ.ಮಾನಸ, ಎಚ್.ಜಿ.ಸ್ವಾತಿ, ಕೆ.ಎಸ್.ಮಾನಸ, ಬಿ.ವಿ.ಈಶ್ವರಮ್ಮ, ಸುಪ್ರಿಯಾ, ಜೈಭಾ ಬಾನು, ವಿ.ವೆಂಕಟಲಕ್ಷಿ$್ಮ, ಬಿ.ಎ.ಆರತಿ ಅವರನ್ನು ಕಾಲೇಜು ಪ್ರಾಂಶುಪಾಲ ಗಂಗಾಧರರಾವ್, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸುಬ್ರಮಣಿ ಮತ್ತು ಕ್ರೀಡಾ ಸಮಿತಿ ಸದಸ್ಯರು, ಕಾಲೇಜು ಬೋಧಕ, ಬೋಧಕೇತರ ಸಿಬ್ಬಂದಿ ಅಭಿನಂದಿಸಿದರು.
ಪ್ರಾಂಶುಪಾಲ ಗಂಗಾಧರ್ರಾವ್ ಮಾತನಾಡಿ, ಕಾಲೇಜಿನ ವಿದ್ಯಾರ್ಥಿನಿಯರು ಕ್ರೀಡೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಈಗಾಗಲೇ ಇಡೀ ಬೆಂಗಳೂರು ಉತ್ತರ ವಿವಿಯಲ್ಲಿ ಮಹಿಳಾ ಕಾಲೇಜಿನ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸುಬ್ರಹ್ಮಣಿ, ಕಾಲೇಜಿನ ವಿದ್ಯಾರ್ಥಿನಿಯರನ್ನು ಉತ್ತಮ ಕ್ರೀಡಾಪಟುಗಳನ್ನಾಗಿ ತಯಾರಿಸಿ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಅಭಿನಂದಿಸಿದರು.