ಪಿಎಂ ಭೇಟಿಯಾದ ಸಂಸದ ಮುನಿಸ್ವಾಮಿ; ಕೆಜಿಎಫ್, ಕ್ಲಾಕ್ ಟವರ್ ವಿಷಯ ಪ್ರಸ್ತಾಪ

muniswamu pic
Published on

ಕೋಲಾರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋಲಾರ ಸಂಸದ ಎನ್​. ಮುನಿಸ್ವಾಮಿ ಇಂದು ದೆಹಲಿಯಲ್ಲಿ ಭೇಟಿ ಮಾಡಿದರು.

ಇಂದು ಪಿಎಂ ಭೇಟಿ ಮಾಡಿದ ಅವರು ಸುದೀರ್ಘ ಇಪ್ಪತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಕೋಲಾರ ಜಿಲ್ಲೆ ಕೆಜಿಎಫ್ ಚಿನ್ನದ ಗಣಿ ಪುನರಾರಾಂಭ ಹಾಗೂ ಚಿನ್ನದ ಗಣಿ ಪ್ರದೇಶದಲ್ಲಿ ಹೊಸ ಕೈಗಾರಿಕಾ ವಲಯ ಸ್ಥಾಪನೆ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.

ಅಲ್ಲದೇ ಕೋಲಾರ ನಗರದ ಕ್ಲಾಕ್ ಟವರ್ ನಲ್ಲಿ 74 ವರ್ಷಗಳ ನಂತರ ತ್ರಿವರ್ಣ ಧ್ವಜ ಹಾರಿಸಿದ ವಿಚಾರವನ್ನು ಮೋದಿ ಬಳಿ ಸಂಸದ ಮುನಿಸ್ವಾಮಿ ಪ್ರಸ್ತಾಪಿಸಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವಂತೆ ಮೋದಿಯವರಿಗೆ‌ ಮನವಿ ಮಾಡಿದ್ದಾರೆ. ಪಿಎಂ ಭೇಟಿಯಾದ ಅವರು ವಿಶೇಷವಾಗಿ ಅಂಬೇಡ್ಕರ್ ವಿಗ್ರಹ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net