ಕೋಲಾರ ಸಂಸದ ಮುನಿಸ್ವಾಮಿ ಹೇಳಿಕೆ ಖಂಡಿಸಿ ಎಸ್‌ಎಫ್‌ಐ ಪ್ರತಿಭಟನೆ

191220 Yalaburga SFI Protest
ಕೋಲಾರದ ಸಂಸದ ಮುನಿಸ್ವಾಮಿ ಹೇಳಿಕೆ ಖಂಡಿಸಿ ಯಲಬುರ್ಗಾದಲ್ಲಿ ಎಸ್‌ಎಫ್‌ಐ ತಾಲೂಕು ಸಮಿತಿಯಿಂದ ಪ್ರತಿಭಟನೆ ನಡೆಯಿತು.
Published on

ಯಲಬುರ್ಗಾ: ವಿದ್ಯಾರ್ಥಿ ಸಂಘಟನೆ ವಿರುದ್ಧ ಕೋಲಾರದ ಸಂಸದ ಮುನಿಸ್ವಾಮಿ ಹೇಳಿಕೆ ಖಂಡಿಸಿ ಪಟ್ಟಣದಲ್ಲಿ ಎಸ್‌ಎಫ್‌ಐ ತಾಲೂಕು ಸಮಿತಿ ಪ್ರತಿಭಟನೆ ನಡೆಸಿತು. ತಾಲೂಕು ಸಂಚಾಲಕ ಎಂ.ಸಿದ್ದಪ್ಪ ಮಾತನಾಡಿ, ಕೋಲಾರದ ವಿಸ್ವಾನ್ ಐಫೋನ್ ಕಂಪನಿಯ ಕಾರ್ಮಿಕರು ವೇತನ ಸಮಸ್ಯೆ ಬಗೆಹರಿಸಲು ಪ್ರತಿಭಟನೆ ನಡೆಸಿದ್ದಾರೆ.

ಘಟನೆಗೆ ಎಸ್‌ಎಫ್‌ಐಗೆ ಸಂಬಂಧವಿಲ್ಲದಿದ್ದರೂ ಹೊರ ರಾಜ್ಯದಿಂದ ಜನರನ್ನು ಕರೆಸಿ ದಾಂಧಲೆ ನಡೆಸಿದೆ ಎಂಬ ಮುನಿಸ್ವಾಮಿ ಹೇಳಿಕೆ ರಾಜಕೀಯ ಪ್ರೇರಿತ ಆರೋಪ. ಸಂಘಟನೆ ನಾಯಕ ಶ್ರೀಕಾಂತರನ್ನು ಬಂಧಿಸಿದ್ದನ್ನು ಸರಿಯಲ್ಲ. ಇಲ್ಲಿರುವುದು ಕಾರ್ಮಿಕರು ಮತ್ತು ಕೈಗಾರಿಕೆ ಪ್ರಶ್ನೆಯಾಗಿದ್ದರೂ ಅನವಶ್ಯಕವಾಗಿ ಸಂಘಟನೆ ಹೆಸರನ್ನು ತಂದಿರುವುದು ಸರಿಯಲ್ಲ. ಕಾರ್ಮಿಕರ ಪರ ಧ್ವನಿ ಎತ್ತಬೇಕಾಗಿದ್ದ ಮುನಿಸ್ವಾಮಿ, ಬಂಡವಾಳಶಾಹಿ ಕಂಪನಿಗಳ ಪ್ರಭಾವಕ್ಕೆ ಒಳಗಾಗಿ ಕಾರ್ಮಿಕರ ಹಿತ ಮರೆತಿದ್ದಾರೆ.

ಸಂಘಟನೆಯ ವಿರುದ್ಧ ಮಾಡಿರುವ ಆರೋಪವನ್ನು ಮುನಿಸ್ವಾಮಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಪದಾಧಿಕಾರಿಗಳಾದ ಭೀಮೇಶ ಪೂಜಾರ್, ದೇವರಾಜ ಪೂಜಾರ್, ಕಿರಣಕುಮಾರ, ಕನಕಪ್ಪ, ಕನಕೇಶ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net