

ಕುಮಟಾ: ಕೆಲಸದ ನಿಮಿತ್ತ ಇಲ್ಲಿನ ತಾಲೂಕು ಸೌಧಕ್ಕೆ ಬಂದಿದ್ದ ವಕೀಲರೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಕೋಲಾರದ ಮಾಲೂರು ಶಕ್ತಿನಗರ ನಿವಾಸಿ ವೆಂಕಟ ಚಲಪತಿ (42) ಹೃದಯಾಘಾತದಿಂದ ಮೃತಪಟ್ಟವರು.
ಪ್ರಕರಣವೊಂದಕ್ಕೆ ಸಂಬಂಧಿಸಿ ಇಲ್ಲಿನ ನ್ಯಾಯಾಲಯದಲ್ಲಿ ದಾಖಲಾತಿ ಪಡೆಯಲು ತಾಲೂಕು ಸೌಧಕ್ಕೆ ಬಂದ ವೇಳೆ ಕುಸಿದು ಬಿದ್ದಿದ್ದಾರೆ. ತಕ್ಷಣ ಸನಿಹದ ಆಸ್ಪತ್ರೆಯೊಂದಕ್ಕೆ ಸಾಗಿಸಲಾಯಿತಾದರೂ ಅದಾಗಲೇ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.