

ಕೋಲಾರ: ಇನ್ನು ಮೂರೇ ದಿನದಲ್ಲಿ ಹಸಮಣೆ ಏರಬೇಕಿದ್ದ ಮದುಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದಲ್ಲಿ ಇಂದು (ಶುಕ್ರವಾರ) ನಡೆದಿದೆ.
ಮಂಗಸಂದ್ರ ಗ್ರಾಮದ ಸತೀಶ್ (30) ನೇಣಿಗೆ ಶರಣಾದ ಮದುಮಗ. ತಮ್ಮ ನಿವಾಸದಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ. ಸತೀಶ್ಗೆ ಮದುವೆ ನಿಶ್ಚಯವಾಗಿತ್ತು. ಇನ್ನು ಮೂರೇ ದಿನದಲ್ಲಿ ವಿವಾಹ ಸಮಾರಂಭ ನಡೆಯಬೇಕಿತ್ತು. ಅಷ್ಟರಲ್ಲಾಗಲೇ ಮೃತ್ಯು ಕೂಪಕ್ಕೆ ತಾವಾಗೇ ಬಿದ್ದಿದ್ದಾರೆ. ಇದನ್ನೂ ಓದಿ: ಕರೊನಾ ಬಗ್ಗೆ ಎಚ್ಚರಿಸಿ ಸರ್ಕಾರದ ಶಿಕ್ಷೆಗೆ ಗುರಿಯಾಗಿ ಮೃತಪಟ್ಟ ವೈದ್ಯನ ಪತ್ನಿಗೆ ಮಗು ಜನನ: ಭಾವುಕ ಮಾತು
ಇನ್ನು ಸತೀಶ್ ಅವರ ದುಡುಕಿನ ನಿರ್ಧಾರಕ್ಕೆ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)