ಜಿಲ್ಲೆಯಲ್ಲಿ 57 ಜನರಿಗೆ ಕರೊನಾ ದೃಢ, 23 ಮಂದಿ ಗುಣಮುಖ

8 narasapura 1
Published on

ಕೋಲಾರ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಶನಿವಾರ ದೃಢಪಟ್ಟ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿದ್ದು, 57 ಮಂದಿಗೆ ಸೋಂಕು ದೃಢಪಟ್ಟರೆ 23 ಮಂದಿ ಗುಣಮುಖರಾಗಿದ್ದಾರೆ.

ಕೋಲಾರದಲ್ಲಿ 28, ಮಾಲೂರು 11, ಬಂಗಾರಪೇಟೆಯಲ್ಲಿ 7, ಕೆಜಿಎಫ್ 6, ಮುಳಬಾಗಿಲು 3 ಮತ್ತು ಶ್ರೀನಿವಾಸಪುರದಲ್ಲಿ 2 ಪ್ರಕರಣ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1798ಕ್ಕೆ ಏರಿಕೆಯಾಗಿದೆ. ಸೋಂಕಿತರ ಪ್ರಥಮ ಸಂಪರ್ಕದಲ್ಲಿದ್ದ 342, ದ್ವಿತಿಯ ಸಂಪರ್ಕದಲ್ಲಿದ್ದ 171 ಮಂದಿಯ ಮೇಲೆ ನಿಗಾ ಇಡಲಾಗಿದೆ.

ಬಂಗಾರಪೇಟೆಯಲ್ಲಿ ವಿಷಮ ಶೀತಜ್ವರ ಕಾಣಿಸಿಕೊಂಡ 6 ಜನರಿಗೆ ಸೋಂಕು ದೃಢಪಟ್ಟರೆ, ಇನ್ನೊಬ್ಬರು ಅನ್ಯ ಕಾರಣದಿಂದ ಸೋಂಕು ಕಂಡಿದೆ. ಕೆಜಿಎಫ್‌ನಲ್ಲಿ ಬೆಂಗಳೂರು ಪ್ರಯಾಣದ ಹಿನ್ನೆಲೆಯಲ್ಲಿ 70ರ ವೃದ್ಧ, 48 ವರ್ಷದ ಪುರುಷನಿಗೆ ಸೋಂಕು ಪತ್ತೆಯಾಗಿದ್ದರೆ, 55 ವರ್ಷದ ಪುರುಷನಿಗೆ ಕರೊನಾ ಜತೆಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಮೂವರು ಸೋಂಕಿತರು ವಿಷಮ ಶೀತಜ್ವರದಿಂದ ಬಾಧಿತರಾಗಿದ್ದಾರೆ.

ಮಾಲೂರಿನಲ್ಲಿ 7 ಸೋಂಕಿತರು ವಿಷಮ ಶೀತಜ್ವರದಿಂದ ಬಳಲುತ್ತಿದ್ದರೆ, ಸಂಪರ್ಕದಿಂದ 4 ಜನರಿಗೆ ಸೋಂಕು ಅಂಟಿದೆ. ಮುಳಬಾಗಿಲಿನಲ್ಲಿ 3 ಸೋಂಕಿತರು ಹಾಗೂ ಶ್ರೀನಿವಾಸಪುರದಲ್ಲಿ ಇಬ್ಬರು ಶೀತಜ್ವರದಿಂದ ಬಳಲುತ್ತಿದ್ದಾರೆ.

ಕೋಲಾರದಲ್ಲಿ ಒಬ್ಬ ಸೋಂಕಿತನಿಂದ ನಾಲ್ವರಿಗೆ, ಇತರ 6 ಜನರಿಗೆ ಪ್ರಥಮ ಸಂಪರ್ಕದಿಂದ ಸೋಂಕು ಹರಡಿದೆ. ವಿಷಮ ಶೀತ ಜ್ವರದಿಂದ ಬಳಲುತ್ತಿರುವ 16 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಬೆಂಗಳೂರು ಪ್ರಯಾಣದಿಂದ ಒಬ್ಬರಿಗೆ, ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ಒಬ್ಬರಿಗೆ ಸೋಂಕು ಬಾಧಿಸಿದೆ.

23 ಮಂದಿ ಗುಣ: ಕೋಲಾರ, ಬಂಗಾರಪೇಟೆ, ಶ್ರೀನಿವಾಸಪುರದಲ್ಲಿ ತಲಾ 4, ಕೆಜಿಎಫ್, ಮಾಲೂರಿನಲ್ಲಿ ತಲಾ 5 ಹಾಗೂ ಮುಳಬಾಗಿಲಿನಲ್ಲಿ ಒಬ್ಬ ಸೋಂಕಿತ ಗುಣಮುಖನಾಗಿ ಮನೆಗೆ ತೆರಳಿದ್ದಾನೆ. ಜಿಲ್ಲೆಯಲ್ಲಿ ಒಟ್ಟು 865 ಸೋಂಕಿತರು ಗುಣಹೊಂದಿದ್ದು, 897 ಸಕ್ರೀಯ ಪ್ರಕರಣಗಳು ಇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net