

ಕೋಲಾರ: ಜಿಲ್ಲೆಯಾದ್ಯಂತ ಶನಿವಾರ 36 ಹೊಸ ಪ್ರಕರಣಗಳು ದೃಢಪಟ್ಟಿದ್ದು, 44 ಮಂದಿ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಕೋಲಾರದಲ್ಲಿ 15 ಹೊಸ ಪ್ರಕರಣ ದೃಢಪಟ್ಟರೆ, ಮಾಲೂರು ಮತ್ತು ಶ್ರೀನಿವಾಸಪುರದಲ್ಲಿ ತಲಾ 4, ಮುಳಬಾಗಿಲು 9, ಕೆಜಿಎಫ್ 3 ಹಾಗೂ ಬಂಗಾರಪೇಟೆಯಲ್ಲಿ 1 ಪ್ರಕರಣ ವರದಿಯಾಗಿದೆ. ಸೋಂಕಿತರ ಪ್ರಥಮ ಸಂಪರ್ಕದಲ್ಲಿದ್ದ 216 ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 144 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 473 ಮಂದಿಗೆ ಸೋಂಕು ತಗುಲಿದೆ.
ಕೋಲಾರದಲ್ಲಿ 15 ವರ್ಷದ ಬಾಲಕಿ, 21 ವರ್ಷದ ಇಬ್ಬರು ಯುವತಿಯರು, 26, 28 ಹಾಗೂ 24 ವರ್ಷದ ಯುವತಿ, 60 ವರ್ಷದ ವೃದ್ಧೆ, 70 ವರ್ಷದ ವೃದ್ಧ, 33 ವರ್ಷ, 52 ವರ್ಷ, 28 ವರ್ಷ, 47, 46 ವರ್ಷದ ಪುರುಷ, ಶೀತಜ್ವರದಿಂದ (ಐಎಲ್‌ಐ) ಬಳಲುತ್ತಿದ್ದು, ಸೋಂಕು ದೃಢಪಟ್ಟಿದೆ. 85 ವರ್ಷದ ವೃದ್ಧನಿಗೆ ಸೋಂಕಿನ ಮೂಲ ತನಿಖಾ ಹಂತದಲ್ಲಿದೆ.
ಅಂತರ ಜಿಲ್ಲಾ ಪ್ರಯಾಣದಿಂದ ಕೋಲಾರದ 40 ಹಾಗೂ 52 ವರ್ಷದ ಪುರುಷ, ಪಿ-6571ರ ಸಂಪರ್ಕದಿಂದ 4 ವರ್ಷದ ಬಾಲಕ, ಪಿ-6907 ರ ಸಂಪರ್ಕದಿಂದ 40 ವರ್ಷದ ಮಹಿಳೆ ವಿಷಮ ಶೀತಜ್ವರದಿಂದ ಬಳಲುತ್ತಿದ್ದು, ಸೋಂಕು ದೃಢಪಟ್ಟಿದೆ.
ಶ್ರೀನಿವಾಸಪುರದಲ್ಲಿ 70 ವರ್ಷದ ವೃದ್ಧೆ, 24 ವರ್ಷದ ಯುವಕ, 19 ವರ್ಷದ ಯುವತಿ, 35 ವರ್ಷದ ಪುರುಷ, ಮುಳಬಾಗಿಲಿನಲ್ಲಿ 18 ವರ್ಷದ ಯುವಕ, 49 ವರ್ಷದ ಪುರುಷ ಐಎಲ್‌ಐ ಪ್ರಕರಣವಾದರೆ, ಅಂತರ ಜಿಲ್ಲಾ ಪ್ರಯಾಣದಿಂದ 22 ವರ್ಷದ ಯುವತಿ, 41, 43 ವರ್ಷದ ಮಹಿಳೆ, 65 ವರ್ಷದ ವೃದ್ಧ, 65 ವರ್ಷದ ವೃದ್ಧ ಹಾಗೂ ವೃದ್ಧೆಗೆ ಐಎಲ್‌ಐ ಪ್ರಕರಣದಿಂದ ಸೋಂಕು ದೃಢಪಟ್ಟಿದೆ, ಪಿ-51862ರ ಸಂಪರ್ಕದಿಂದ 42 ವರ್ಷದ ಮಹಿಳೆಗೆ, ಕೆಜಿಎಫ್‌ನಲ್ಲಿ 54, 56 ವರ್ಷದ ಪುರುಷನಿಗೆ ಐಎಲ್‌ಐ ನಿಂದ ಸೋಂಕು ದೃಢಪಟ್ಟರೆ 47 ವರ್ಷದ ಮಹಿಳೆಗೆ ಸೋಂಕಿನ ಮೂಲ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಮಾಲೂರಿನಲ್ಲಿ 39 ವರ್ಷದ ಪುರುಷನಿಗೆ, 90 ವರ್ಷದ ವೃದ್ಧನಿಗೆ ಸೋಂಕು ದೃಢಪಟ್ಟಿದೆ.
17 ಮಂದಿ ಐಸಿಯುನಲ್ಲಿ: ಅತಿ ಹೆಚ್ಚು ಕರೊನಾ ಪ್ರಕರಣ ಹೊಂದಿರುವ ಕೋಲಾರದಲ್ಲಿ ಶನಿವಾರ 26 ಮಂದಿ ಬಿಡುಗಡೆಯಾದರೆ ಮಾಲೂರಿನಲ್ಲಿ 5, ಬಂಗಾರಪೇಟೆ 4, ಕೆಜಿಎಫ್ 3, ಮುಳಬಾಗಿಲು 5 ಹಾಗೂ ಶ್ರೀನಿವಾಸಪುರದಲ್ಲಿ 1 ಸೇರಿ ಒಟ್ಟು 44 ಮಂದಿ ಬಿಡುಗಡೆಯಾಗಿದ್ದು, ಗುಣಮುಖರಾದವರ ಸಂಖ್ಯೆ 200ಕ್ಕೆ ಏರಿದೆ. 264 ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ 17 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮಗಳು ಸೀಲ್‌ಡೌನ್: ಮಾಲೂರು ತಾಲೂಕಿನ ಹುಳದೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಹಾಗೂ ಸೀತನಾಯಕನಹಳ್ಳಿ ಗ್ರಾಮದ ಗರ್ಭಿಣಿ ಸೇರಿ ಕುಟುಂಬದ 3 ಮಂದಿಗೆ ಸೋಂಕು ದೃಢಪಟ್ಟಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸೀತನಾಯಕನಹಳ್ಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ತೆರಳಿ ಸೋಂಕಿತರನ್ನು ಹೆಚ್ಚಿನ ಚಿಕಿತ್ಸೆಗೆ ಕೋವಿಡ್ ಆಸ್ಪತ್ರೆಗೆ ರವಾನಿಸಿ ಗ್ರಾಮಗಳಲ್ಲಿ ಹಾಗೂ ಪಟ್ಟಣವನ್ನು ಸೀಲ್‌ಡೌನ್ ಮಾಡಿದ್ದಾರೆ.
ಎಸ್ಪಿ ಮನೆ ಅಡುಗೆ ಸಿಬ್ಬಂದಿಗೆ ಸೋಂಕು: ಕೋಲಾರದ ಎಸ್ಪಿ ಕಾರ್ತಿಕ್‌ರೆಡ್ಡಿ ಅವರ ಮನೆ ಅಡುಗೆ ಸಿಬ್ಬಂದಿಗೆ ಕರೊನಾ ಖಚಿತಪಟ್ಟಿದ್ದು, ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತನ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಲಾಗಿದೆ. ಜತೆಗೆ ಎಸ್ಪಿಗೂ ಕರೊನಾ ಪರೀಕ್ಷೆ ನಡೆಸಿದ್ದು, ವರದಿ ನೆಗೆಟಿವ್ ಬಂದಿದೆ.