ಕೋಲಾರಮ್ಮ ಉತ್ಸವದ ಅಂಗವಾಗಿ ಶಕ್ತಿದೇವತೆಗಳಿಗೆ ಅಲಂಕಾರ

13-klr-8
Published on

ಕೋಲಾರ: ನಗರ ದೇವತೆ ಕೋಲಾರಮ್ಮ ಉತ್ಸವದ ಅಂಗವಾಗಿ ಸೋಮವಾರ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಆಚರಿಸಲಾಯಿತು. ಮುಂಜಾಗ್ರತಾ ಕ್ರಮಗಳೊಂದಿಗೆ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ದೇವಾಲಯದ ಹೊರಾಂಗಣದಲ್ಲಿ ಭಕ್ತರಿಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ದೈಹಿಕ ಅಂತರದೊಂದಿಗೆ ದರ್ಶನ ಪಡೆದರು.

ಅನ್ಮನವರ ಮೂಲ ವಿಗ್ರಹ ಹಾಗೂ ಉತ್ಸವ ಮೂರ್ತಿಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಇಡೀ ದೇವಾಲಯವನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು.

ಮುಳಬಾಗಿಲಿನ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅಮ್ಮನವರಿಗೆ ಶ್ರೇಷ್ಠವಾದ ಲಿಂಬೆಹಣ್ಣನ್ನು ಭಕ್ತರಿಗೆ ಪ್ರಸಾದವಾಗಿ ನೀಡುವ ವ್ಯವಸ್ಥೆ ಕಲ್ಪಿಸಿದ್ದರು. ದೇವಾಲಯಕ್ಕೆ ಭೇಟಿ ನೀಡಿದ ಕೊತ್ತೂರು ವಿಶೇಷ ಪೂಜೆ ಸಲ್ಲಿಸಿದರು.

ನಗರದ ಗಲ್‌ಪೇಟೆಯ ಚಾಮುಂಡೇಶ್ವರಿ, ಅಮ್ಮವಾರಿಪೇಟೆಯ ನೆಲಗಂಗಮ್ಮ ದೇವಸ್ಥಾನ, ಕಠಾರಿ ಗಂಗಮ್ಮ ದೇವಸ್ಥಾನ, ಸಪಲಮ್ಮ ದೇವಸ್ಥಾನ ಸೇರಿ ಎಲ್ಲ ಶಕ್ತಿ ದೇವಾಲಯಗಳಲ್ಲಿ ಅಮ್ಮನವರಿಗೆ ವಿಶೇಷ ಪೂಜೆ, ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net