ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶ

29 budikote 1
Published on

ಬೂದಿಕೋಟೆ: ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಬೂದಿಕೋಟೆ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ರಾತ್ರಿ ಆನೆಗಳ ಹಿಂಡು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶ ಮಾಡಿವೆ.

ಬೂದಿಕೋಟೆ ಗ್ರಾಪಂ ವ್ಯಾಪ್ತಿಯ ದಿನ್ನಕೊತ್ತೂರು ಗ್ರಾಮದ ಹೊರವಲಯದಲ್ಲಿ 30ಕ್ಕೂ ಹೆಚ್ಚು ಕಾಡಾನೆಗಳು ಟಿಕಾಣಿ ಹೂಡಿದ್ದವು. ಬಂಗಾರಪೇಟೆ ಹಾಗೂ ಮಾಲೂರು ತಾಲೂಕಿನ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಆದರೆ ಎರಡು ತಾಲೂಕಿನ ಸಿಬ್ಬಂದಿಯಲ್ಲಿ ಮನಸ್ತಾಪ ಉಂಟಾಗಿ ಯಾವುದೇ ಕಾರಣಕ್ಕೂ ಬಂಗಾರಪೇಟೆ ತಾಲೂಕು ವ್ಯಾಪ್ತಿಗೆ ಕಾರ್ಯಾಚರಣೆ ಮಾಡಬಾರದೆಂದು ಬಂಗಾರಪೇಟೆ ಅರಣ್ಯ ಇಲಾಖೆ ಸಿಬ್ಬಂದಿ ಪಟ್ಟುಹಿಡಿದಿದ್ದಾರೆ.

ಇತ್ತ ಮಾಲೂರು ತಾಲೂಕಿನ ಅರಣ್ಯ ಇಲಾಖೆ ಮಾಲೂರಿಗೆ ಬಂದು ಬಂಗಾರಪೇಟೆಯವರು ಕಾರ್ಯಾಚರಣೆ ಮಾಡಬಾರದೆಂಬ ಉದ್ದೇಶದಿಂದ ಜಿದ್ದಾಜಿದ್ದಿಗೆ ಮುಂದಾಗಿದ್ದರಿಂದ ಇಡೀ ರಾತ್ರಿ ಇವರಿಬ್ಬರ ಮನಸ್ತಾಪ ಹಾಗೂ ಜಗಳದಿಂದ ಆನೆಗಳು ಪಚ್ಚಾರ್ಲಹಳ್ಳಿ ಗ್ರಾಮದ ರೈತ ಮುನಿರಾಜು ಅವರ ಎರಡು ಎಕರೆಯಲ್ಲಿ ಬೆಳೆದ ರಾಗಿ, ನಾಗೇಶ್ ಅವರ ಎಲೆಕೋಸು, ಆನಂದ್ ಅವರ ಬೋರ್ವೆಲ್, ಬೊಮ್ಮಗಾನಹಳ್ಳಿ ಗ್ರಾಮದ ರೈತ ಕಣ್ಣಪ್ಪ ಅವರ ಎರಡು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ಸೇರಿ ಲಕ್ಷಾಂತರ ರೂ. ಮೌಲ್ಯದ ಬೆಳೆಗಳನ್ನು ನಾಶ ಮಾಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net