ಕೋಲಾರದಲ್ಲಿ ಇನ್ನೂ ಜಾರಿಯಾಗದ ಇ-ಪರಿಹಾರ ಅಪ್ಲಿಕೇಷನ್

13 budikote 1
Published on

ಬೂದಿಕೋಟೆ: ಕಾಡುಪ್ರಾಣಿಗಳ ದಾಳಿಯಿಂದ ಬೆಳೆ ಕಳೆದುಕೊಂಡರೆ ಮತ್ತು ಸಾಕು ಪ್ರಾಣಿಗಳು ಸತ್ತರೆ ಅಂತಹ ರೈತರಿಗೆ ಶೀಘ್ರ ಪರಿಹಾರ ವಿತರಿಸಲು ಅರಣ್ಯ ಇಲಾಖೆ ಜಾರಿಗೆ ತಂದಿರುವ ಇ-ಪರಿಹಾರ ಅಪ್ಲಿಕೇಷನ್ ಅಧಿಕಾರಿಗಳ ನಿರ್ಲಕ್ಷದಿಂದ ಸಮರ್ಪಕವಾಗಿ ಕಾರ್ಯರೂಪಕ್ಕೆ ಬರದೆ ರೈತರು ಇಲಾಖೆಗೆ ಅಲೆಯುವಂತಾಗಿದೆ.

ಆಗಸ್ಟ್ 2019ರಂದು ಜಾರಿಗೆ ಬಂದ ಯೋಜನೆ ಕೋಲಾರದಲ್ಲಿ ಮಾತ್ರ ಅನುಷ್ಠಾನವಾಗಿಲ್ಲ. ಇ-ಪರಿಹಾರದ ಅಪ್ಲಿಕೇಷನ್ ಸರಳವಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಅಥವಾ ಅಧಿಕಾರಿಗಳು ಬೆಳೆ ಹಾನಿ ಪ್ರದೇಶಕ್ಕೆ ತೆರಳಿ, ೆಟೋ, ಸರ್ವೇ ನಂಬರ್, ಹಾನಿಯ ಅಂದಾಜು, ವಿಸ್ತೀರ್ಣ, ರೈತರ ಮೊಬೈಲ್ ಸಂಖ್ಯೆ ಇತ್ಯಾದಿಗಳನ್ನು ರೈತನ ಅರ್ಜಿ ಜತೆ ಅಪ್ಲಿಕೇಷನ್‌ನಲ್ಲಿ ಅಪ್ಲೋಡ್ ಮಾಡುತ್ತಾರೆ. ಅಪ್ಲೋಡ್ ಆದ ಮಾಹಿತಿ ಆಧಾರದ ಮೇರೆಗೆ ಡಿಆರ್‌ಎಫ್‌ಒ, ಆರ್‌ಎಫ್‌ಒ ಹಾಗೂ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿ ಪರಿಹಾರದ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡುತ್ತಾರೆ.

ರೈತರಿಗೆ ಸಿಗದ ಪರಿಹಾರ: ಜಿಲ್ಲೆಯ ಮಾಲೂರು ಹಾಗೂ ಬಂಗಾರಪೇಟೆ ತಾಲೂಕಿನಲ್ಲಿ ಆನೆ ದಾಳಿಯಿಂದ ಬೆಳೆ ಕಳೆದುಕೊಂಡ ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಕಳೆದೊಂದು ವರ್ಷದಿಂದ 300ಕ್ಕೂ ಹೆಚ್ಚಿನ ರೈತರಿಗೆ ಪರಿಹಾರವೇ ಸಿಕ್ಕಿಲ್ಲ. ಇನ್ನಾದರೂ ಅಧಿಕಾರಿಗಳು ಅಪ್ಲಿಕೇಷನ್ ಜಾರಿಗೊಳಿಸಿ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ದಾಳಿಗೆ ತುತ್ತಾದ ಬೆಳೆ ಮಾಹಿತಿ ಸಂಗ್ರಹಿಸಿ ಶೀಘ್ರ ಪರಿಹಾರ ನೀಡಲು ಮುಂದಾಗಬೇಕು ಎಂಬುದು ಜಿಲ್ಲೆಯ ರೈತರ ಒತ್ತಾಯವಾಗಿದೆ.

ಅಪ್ಲಿಕೇಷನ್ ಕುರಿತು ತರಬೇತಿ ಅಗತ್ಯವಿದ್ದು, ಸಿಬ್ಬಂದಿಗೆ ತರಬೇತಿ ನೀಡಲು ಹಿರಿಯ ಅಧಿಕಾರಿಗಳನ್ನು ಕೋರಲಾಗಿದೆ. ತರಬೇತಿ ಪಡೆದ ಕೂಡಲೆ ಕಾಡು ಪ್ರಾಣಿ ದಾಳಿ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಅಪ್ಲೋಡ್ ಮಾಡಿ ಶೀಘ್ರ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ದಿವಾಕರ್, ಆರ್‌ಎಫ್‌ಒ ಮಾಲೂರು ಕಾಡು ಪ್ರಾಣಿಗಳಿಂದ ಬೆಳೆ ಹಾಗೂ ಸಾಕು ಪ್ರಾಣಿಗಳನ್ನು ಕಳೆದುಕೊಂಡರೆ ತ್ವರಿತವಾಗಿ ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಯಾವ ಭಾಗದಲ್ಲಿ ಯಾವ ಪ್ರಾಣಿಗಳಿಂದ ಹಾನಿಯಾಗುತ್ತಿದೆ ಎಂಬ ಮಾಹಿತಿ ಇಲಾಖೆಗೆ ಸಿಗಲಿದೆ. ಏ.1ರಿಂದ ಕಡ್ಡಾಯವಾಗಿ ಎಲ್ಲ ಜಿಲ್ಲೆಗಳಲ್ಲಿ ಆ್ಯಪ್ ಅನುಷ್ಠಾನಗೊಳಿಸಲಾಗುವುದು. ಲೇಖದರ್ಶಿನಿ, ವಲಯ ಅರಣ್ಯಾಧಿಕಾರಿ, ಮಾಹಿತಿ ಸಂವಹನ ತಂತ್ರಜ್ಞಾನ ಘಟಕ, ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net