ಶಾರ್ಟ್ ಸರ್ಕ್ಯೂಟ್‌ನಿಂದ ಗುಡಿಸಲಿಗೆ ಬೆಂಕಿ ತಗುಲಿ ಪತಿ ಎದುರೇ ಸುಟ್ಟು ಕರಕಲಾದ ಪತ್ನಿ

19 btm 01
Published on

ಬೇತಮಂಗಲ: ನತ್ತ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಗುಡಿಸಲಿಗೆ ಬೆಂಕಿ ತಗುಲಿ ಮಹಿಳೆ ಸುಟ್ಟು ಕರಕಲಾಗಿದ್ದಾಳೆ. ನತ್ತ ಗ್ರಾಮದ ನಿವಾಸಿ ಹೈದರ್ ಸಾಬ್ ಪತ್ನಿ ಹಸೀನಾ ಬೇಗಂ (45) ಮೃತೆ.

ಮಂಗಳವಾರ ಹೈದರ್‌ಸಾಬ್ ಮತ್ತು ಆತನ ಪತ್ನಿ ಹಸೀನಾ ಬೇಗಂ ರಾತ್ರಿ ಮಲಗಿದ್ದಾಗ ಇದ್ದಕ್ಕಿದ್ದಂತೆ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿದೆ. ಎಚ್ಚೆತ್ತ ದಂಪತಿಗಳು ಹೊರ ಬಂದಿದ್ದಾರೆ. ಆದರೆ, ಮೊಮ್ಮಗಳ ಮದುವೆಗೆ ಕೂಡಿಟ್ಟಿದ್ದ ಒಂದೂವರೆ ಲಕ್ಷ ರೂ. ಮತ್ತು ಒಡವೆ ತರಲು ಹಸೀನಾ ಬೇಗಂ ಮನೆಯೊಳಗೆ ಹೋದಾಗ ಮನೆ ಮೇಲ್ಛಾವಣಿ ಹಾಗೂ ಗೋಡೆ ಕುಸಿದಿದೆ. ಹೈದರ್ ಸಾಬ್ ತನ್ನ ಪತ್ನಿಯನ್ನು ಕಾಪಾಡಲು ಮುಂದಾದರಾದರೂ ಪ್ರಯೋಜನವಾಗದೆ ಕಣ್ಮುಂದೆಯೇ ಬೆಂಕಿಗೆ ಆಹುತಿಯಾಗಿದ್ದಾರೆ. ಬಳಿಕ ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದರು.

ಶಾಸಕಿ ರೂಪಕಲಾ ನೆರವು: ಸ್ಥಳಕ್ಕೆ ಕೆಜಿಎಫ್ ಕ್ಷೇತ್ರದ ಶಾಸಕಿ ರೂಪಕಲಾ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮೃತಳ ಪತಿಗೆ 25 ಸಾವಿರ ರೂ. ನೆರವು ನೀಡಿ ಸಾಂತ್ವನ ಹೇಳಿ ಶೀಘ್ರ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net