ಕೋಲಾರ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಿರಲಿ

1-klr-3
Published on

ಕೋಲಾರ: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುವಾರ್ ಸೂಚಿಸಿದರು.

ಜಿಪಂ ಸಭಾಂಗಣದಲ್ಲಿ ಮಂಗಳವಾರ ಸಂಸದರ ಆದರ್ಶ ಗ್ರಾಮ ಯೋಜನೆಯ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಾತನಾಡಿ, ಏಪ್ರಿಲ್ ತಿಂಗಳಲ್ಲಿ ಬೇಸಿಗೆಯ ತಾಪ ಹೆಚ್ಚಾಗಲಿದೆ. ಈ ಸಮಯದಲ್ಲಿ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಎಲ್ಲ ತಾಲೂಕಿಗೆ ಅಂತರ್ಜಲ ತಜ್ಞರನ್ನು ಕಳುಹಿಸಿ ಜಲ ಬಿಂಧು ಸಿಗುವ ಪ್ರದೇಶ ಗುರಿತಿಸಿ ಕ್ರಿಯಾ ಯೋಜನೆ ಸಿದ್ಧಪಡಿಸಿಕೊಟ್ಟರೆ ಸರ್ಕಾರದಿಂದ ಅನುದಾನ ಬಿಡುಗಡೆ ವಾಡಿಸುವೆ ಎಂದು ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ನಾಗರಾಜ್ ಅವರಿಗೆ ಸೂಚಿಸಿದರು.

ಖಾಸಗಿಯವರು ಕೊಳವೆ ಬಾವಿ ಕೊರೆಸಿದರೆ ನೀರು ಸಿಗುತ್ತದೆ. ಸರ್ಕಾರದಿಂದ ಕೊರೆಸಿದರೆ ಏಕೆ ನೀರು ಸಿಗಲ್ಲ. ಖಾಸಗಿ ಜಮೀನಿನಲ್ಲಿ ನೀರು ಸಿಗುತ್ತದೆ ಎಂದಾದಲ್ಲಿ ಇಡೀ ಹಳ್ಳಿಯಲ್ಲಿ ನೀರು ಇದೆ ಎಂದೇ ಅರ್ಥ, ಅಧಿಕಾರಿಗಳು ಗ್ರಾಮ ನಕ್ಷೆಯಲ್ಲಿ ಕಾಣುವ ಗೋವಾಳ, ಗುಂಡುತೋಪು, ಶಾಲಾ ಆವರಣ ಸೇರಿ ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಕೊಳವೆ ಬಾವಿ ಕೊರೆಸಿ ಪೈಪ್‌ಲೈನ್ ಮೂಲಕ ನೀರು ಸರಬರಾಜು ವಾಡಬೇಕೆಂದು ಸಲಹೆ ನೀಡಿದರು.

ಒಂದು ವೇಳೆ ಸರ್ಕಾರಿ ಜಾಗದಲ್ಲಿ ನೀರು ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಕೊಳವೆ ಬಾವಿಯನ್ನು ಲೀಸ್ ಇಲ್ಲವೇ ಬಾಡಿಗೆಗೆ ಪಡೆದು ನೀರು ಸರಬರಾಜು ವಾಡಬೇಕು. ಇದಕ್ಕೆ ಬೇಕಾದ ಅನುದಾನ ಒದಗಿಸುವುದು ನನ್ನ ಜವಾಬ್ದಾರಿ ಎಂದರು.

ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಮತ್ತು ವಾಲೂರಿನ ಬನಹಳ್ಳಿಯನ್ನು ಸಂಸದರ ಆದರ್ಶ ಗ್ರಾಮವೆಂದು ೋಷಣೆ ವಾಡಲಾಗಿದೆ. ಈ ಎರಡು ಗ್ರಾಮಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಎಲ್ಲ ಇಲಾಖೆ ಬದ್ಧತೆ ತೋರಬೇಕು. ಅಧಿಕಾರಿಗಳು ತಮ್ಮಇಲಾಖೆಯಿಂದ ಅನುಷ್ಠಾನಗೊಳಿಸಬೇಕಾಗಿರುವ ಕಾರ್ಯಕ್ರಮಗಳ ಬಗ್ಗೆ ನಿಗಾ ವಹಿಸಿ ಎಂದು ಸೂಚಿಸಿದರು.

ನಾವು ಗುವಾಸ್ಯರಷ್ಟೆ.: ಸಂಸದರ ಆದರ್ಶ ಗ್ರಾಮ ಯೋಜನೆ ಅನುಷ್ಠಾನ ಸಮಿತಿಗೆ ಸಂಸದ ಎಸ್.ಮುನಿಸ್ವಾಮಿ ಅವರೇ ಅಧ್ಯಕ್ಷರು, ಕಾಮಗಾರಿಗಳ ಮೇಲೆ ನಿಗಾವಹಿಸಲು ಎನ್‌ಜಿಒಗೆ ವಹಿಸಲಾಗಿದೆ. ನಾವೇನಿದ್ದರೂ ಗುವಾಸ್ತರಷ್ಟೇ. ಸಂಸದರೇ ಆಯ್ಕೆ ವಾಡಿರುವ ಸಮಿತಿ ಸದಸ್ಯರಾದ ತಾವು ನೀಡುವ ಸಲಹೆ ಆಧರಿಸಿ ನಮ್ಮಕಡೆಯಿಂದ ಎಲ್ಲ ರೀತಿಯ ಸಹಕಾರ ಸಿಗುತ್ತದೆ ಎಂದು ಸದಸ್ಯ ಸೂರ್ಯನಾರಾಯಣರಾವ್ ಅವರಿಗೆ ತಿಳಿಸಿದರು.

ಕ್ಯಾಸಂಬಳ್ಳಿಯ ಅಭಿವೃದ್ಧಿಗೆ ಸರ್ಕಾರ 2 ಕೋಟಿ ರೂ. ನೀಡಿದೆ. ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಅರಣ್ಯ ಇಲಾಖೆ ಸಮನ್ವಯದಿಂದ ಕೆಲಸ ವಾಡುವ ಮೂಲಕ ರಾಜ್ಯದ ಮೊದಲ ಸಿಎಂ ಕೆ.ಸಿ.ರೆಡ್ಡಿ ಅವರ ಹುಟ್ಟೂರನ್ನು ವಾದರಿ ಗ್ರಾಮವಾಗಿಸಬೇಕೆಂದರು.

ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಗಾಯಿತ್ರಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರೂಪಾದೇವಿ, ಜವಳಿ ಮತ್ತು ಕೈಮಗ್ಗ ಇಲಾಖೆಯ ಉಪ ನಿರ್ದೇಶಕಿ ಸೌಮ್ಯಗೌಡ, ಕೈಗಾರಿಕೆ ಇಲಾಖೆಯ ಉಪನಿರ್ದೇಶಕ ರವಿಚಂದ್ರ, ಕ್ರೀಡಾ ಇಲಾಖೆಯ ಅಧಿಕಾರಿ ಮಂಜುನಾಥ್ ಭಾಗವಹಿಸಿದ್ದರು.

ಸಮನ್ವಯತೆ ಅತ್ಯಗತ್ಯ: ಜಿಲ್ಲೆಯಲ್ಲಿ ಪೌತಿ ಖಾತೆ ಆಂದೋಲನ ಇನ್ನಷ್ಟು ಚುರುಕುಗೊಳ್ಳಬೇಕು. ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಕಷ್ಟು ಕಾರ್ಯಕ್ರಮ ನೀಡಿದ್ದರೂ ರೈತರ ಮನಸ್ಥಿತಿ ಬದಲಾಗಿಲ್ಲ. ರೈತರು ಮತ್ತು ಅಧಿಕಾರಿಗಳ ನಡುವೆ ಇನ್ನಷ್ಟು ಸಮನ್ವಯತೆ ಅತ್ಯವಶ್ಯಕ ಎಂದು ಸೂರ್ಯನಾರಾಯಣರಾವ್ ತಿಳಿಸಿದರು.

ಜಿಲ್ಲೆಯಲ್ಲಿ ಪೌತಿ ಖಾತೆ ಆಂದೋಲನ ಯಶಸ್ವಿಗೊಳ್ಳಬೇಕಾದರೆ ಕೇವಲ ಕಂದಾಯ ಇಲಾಖೆಯಿಂದ ವಾತ್ರ ಸಾಧ್ಯವಿಲ್ಲ. ಸರ್ವೇಯರ್‌ಗಳ ಪಾತ್ರ ಮುಖ್ಯ. ರೈತರಿಗೆ ಪಹಣಿ ನೀಡುವ ವಿಚಾರದಲ್ಲಿ ತಹಸೀಲ್ದಾರ್, ತಾಪಂ ಇಒ, ಎಸಿ, ಆರ್‌ಐಗಳು, ವಿಎಗಳು ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಎಂ.ಆರ್.ರವಿಕುವಾರ್, ಸಿಇಒ ಜಿಪಂ ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net