ಬೆಳೆ ಸಮೀಕ್ಷೆ ಮಾಡಲು ರೈತರಿಗೆ ಅರಿವಿನ ಕೊರತೆ

12 mbl ph 3
Published on

ಮುಳಬಾಗಿಲು: ಸರ್ಕಾರ ನೀಡುವ ಪರಿಹಾರದಿಂದ ರೈತರು ವಂಚಿತರಾಗಬಾರದು ಎಂಬ ಕಾರಣಕ್ಕೆ ಬೆಳೆಯನ್ನು ಆಗಿಂದಾಗ್ಗೆ ಮೊಬೈಲ್ ಆ್ಯಪ್ ಮೂಲಕ ಅಪ್‌ಲೋಡ್ ಮಾಡು ಅವಕಾಶ ಒದಗಿಸಿದ್ದರೂ ಸರಿಯಾದ ಮಾಹಿತಿ ಹಾಗೂ ಮಾರ್ಗದರ್ಶನದ ಕೊರತೆಯಿಂದ ಜನಪ್ರಿಯ ಕಾರ್ಯಕ್ರಮ ವಿಲತೆ ಕಂಡುಬರುತ್ತದೆ.

ಒಗ್ಗಿಕೊಳ್ಳದ ರೈತರು: ಬೆಳೆಗಳ ದಾಖಲೀಕರಣವನ್ನು ಮೊಬೈಲ್ ಆ್ಯಪ್ ಮೂಲಕ ಅಪ್‌ಲೋಡ್ ಮಾಡಬೇಕು. ಆದರೆ ಬಹುತೇಕ ರೈತರು ಈ ವ್ಯವಸ್ಥೆಗೆ ಒಗ್ಗಿಕೊಳ್ಳಲು ಸಾಧ್ಯವಾಗದೆ ಖಾಸಗಿ ಗ್ರಾಮ ಪ್ರತಿನಿಧಿಗಳ ಮೂಲಕ ಬೆಳೆ ಸಮೀಕ್ಷೆ ಅಪ್‌ಲೋಡ್ ಮಾಡುವ ಕಾಯಕ ಆರಂಭಿಸಿದ್ದಾರೆ.

ಒಂದು ಸರ್ವೇ ನಂಬರ್ ಫ್ಲಾಟ್‌ಗೆ 10 ರೂ. ನಂತೆ ಖಾಸಗಿ ಪ್ರತಿನಿಧಿಗಳಿಗೆ ಸರ್ಕಾರ ನೀಡಬೇಕು. ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡುತ್ತಿದ್ದಂತೆ ರೈತರ ಜಮೀನಿನೊಳಗೆ ಸರ್ವೇ ನಂಬರ್ ತೋರಿಸಲಿದ್ದು, ರೈತರ ಮತ್ತು ಬೆಳೆಯ ಫೋಟೋ ತೆಗೆದು ಅಪ್‌ಲೋಡ್ ಮಾಡಲಾಗುತ್ತಿದೆ.

2017-18ನೇ ಸಾಲಿನಲ್ಲೇ ಈ ಯೋಜನೆ ಪ್ರಾರಂಭವಾದರೂ ದಾಖಲೀಕರಣ ಪೂರ್ಣ ಪ್ರಮಾಣದಲ್ಲಿ ಆಗಿರಲಿಲ್ಲ. ಪಹಣಿಯಲ್ಲಿ ದಾಖಲಾಗಿರುವ ಬೆಳೆಗಳು ಒಂದಾದರೆ ಪ್ರಸ್ತುತ ನಷ್ಟವಾಗಿರುವ ಬೆಳೆಗಳೇ ಒಂದಾಗಿದ್ದರಿಂದ ಅನೇಕರಿಗೆ ಪರಿಹಾರ ಪಡೆಯಲು ಸಾಧ್ಯವಾಗಿಲ್ಲ. ಕಳೆದ ವರ್ಷದ ಬೆಂಬಲ ಬೆಲೆಯಲ್ಲಿ ರಾಗಿಯನ್ನು ಎಪಿಎಂಸಿ ಮೂಲಕ ಸರ್ಕಾರ ಖರೀದಿಸಿದಾಗ ರೈತರ ಪಹಣಿಯಲ್ಲಿ ಬೇರೆ ಬೆಳೆ ದಾಖಲಾಗಿದ್ದರಿಂದ ವಾಪಸ್ ಕಳುಹಿಸಲಾಗಿತ್ತು.

ರೈತರಿಗೆ ಅರಿವು ಮೂಡಿಸಿ: ರೈತರು ಆಂಡ್ರಾಯ್ಡಾ ಮೊಬೈಲ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಜಮೀನಿಗೆ ಹೋದಾಗ ಜಿಪಿಎಸ್ ಸಹಾಯದೊಂದಿಗೆ ಜಮೀನಿನ ಸರ್ವೇ ನಂಬರ್ ತೋರಿಸುತ್ತದೆ. ಆಗ ಜಮೀನಿನ ಬೆಳೆಯೊಂದಿಗೆ ರೈತನ ಭಾವಚಿತ್ರ ಸಹ ದಾಖಲಾಗುತ್ತದೆ. ಇದರಿಂದ ಬೆಳೆ ದಾಖಲೀಕರಣ ಕಾಲ ಕಾಲಕ್ಕೆ ಮಾಡಿಕೊಳ್ಳುವ ಅವಕಾಶದೊಂದಿಗೆ ಸರ್ಕಾರದಿಂದ ಸಾಲ ಸೌಲಭ್ಯ ಮತ್ತಿತರ ಸೌಕರ್ಯ ಪಡೆಯಲು ಉಪಯುಕ್ತವಾಗಿದೆ. ರೈತರಿಗೆ ಈ ಬಗ್ಗೆ ಅರಿವು ಮೂಡಿಸಿದರೆ ಮುಂದಿನ ವರ್ಷಗಳಲ್ಲಿ ಅವರೇ ಬೆಳೆ ದಾಖಲೀಕರಣ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ತಾಲೂಕಿನಲ್ಲಿ 1,54,966 ಸರ್ವೆ ನಂಬರ್‌ಗಳಿದ್ದು ಇದುವರೆಗೆ 78684 ಸರ್ವೇ ನಂಬರ್‌ಗಳ ದಾಖಲೀಕರಣ ಮಾಡಲಾಗಿದೆ. ಶೇ.50.75 ಗುರಿ ಮುಟ್ಟಲಾಗಿದೆ. ಕೆ.ಎನ್.ರಾಜಶೇಖರ್, ತಹಸೀಲ್ದಾರ್, ಮುಳಬಾಗಿಲು ಎಲ್ಲ ರೈತರು ಮೊಬೈಲ್ ಪರಿಣಿತಿ ಪಡೆದಿಲ್ಲ. ಪ್ರತಿ ಗ್ರಾಮದಲ್ಲೂ ಮೊಬೈಲ್ ಆ್ಯಪ್ ಸಾಕ್ಷರತೆ ಮಾಡಿದರೆ ರೈತರಿಗೆ ಉಪಯುಕ್ತವಾಗುತ್ತದೆ. ಇದರಿಂದ ರೈತರೂ ಎಲ್ಲ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ. ಪಿ.ಎಸ್.ಗಂಗಾಧರ್, ಪೆತ್ತಾಂಡ್ಲಹಳ್ಳಿ ರೈತ, ಮುಳಬಾಗಿಲು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net