

ಮುಳಬಾಗಿಲು: ಕರೊನಾ ಸಂದರ್ಭದಲ್ಲಿ ಸರ್ಕಾರ ಹಲವಾರು ಕಾಯ್ದೆಗಳನ್ನು ಜಾರಿಗೆ ತಂದು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿ ತಾಲೂಕು ಕಚೇರಿಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಆವನಿ ಬ್ಲಾಕ್ ಕಾಂಗ್ರೆಸ್ ವಾಜಿ ಅಧ್ಯಕ್ಷ ಜಿ.ರಾಮಲಿಂಗಾರೆಡ್ಡಿ ವಾತನಾಡಿ, ಬಿಜೆಪಿ ಸರ್ಕಾರ ಸೌಲಭ್ಯಗಳನ್ನು ಕಿತ್ತುಕೊಂಡು ಶ್ರೀಮಂತರ ಪರ ಕಾರ್ಯನಿರ್ವಹಿಸುತ್ತಿದೆ. ಸಚಿವ ಎಚ್.ನಾಗೇಶ್ ಉತ್ತಮ ಆಡಳಿತ ನಡೆಸುತ್ತಿದ್ದರೂ ಕ್ಷೇತ್ರಕ್ಕೆ ಅವರ ಕೊಡುಗೆ ಸಾಲದಾಗಿದೆ, ತಾಲೂಕಿಗೆ ಇನ್ನೂ ಕೆ.ಸಿ.ವ್ಯಾಲಿ ನೀರು ತರಲು ಸಾಧ್ಯವಾಗುತ್ತಿಲ್ಲ ಎಂದರು.
ಕಾಂಗ್ರೆಸ್ ಎಸ್ಸಿ ಸೆಲ್ ಆವನಿ ಬ್ಲಾಕ್ ಅಧ್ಯಕ್ಷ ವಿ.ವಾರಪ್ಪ ವಾತನಾಡಿ, ಎತ್ತಿನಹೊಳೆ ನೀರಾವರಿ ಯೋಜನೆ ಜಾರಿ ವಾಡಬೇಕು, ಬಾಕಿ ಇರುವ ರೈತರ ಸಾಲ ಮನ್ನಾ ವಾಡಬೇಕು, ತಾಲೂಕಿನ ಕೆರೆ ಸ್ವಚ್ಛ ವಾಡಿ ಅಭಿವೃದ್ಧಿ ಪಡಿಸಬೇಕು, ಹಾಲಿಗೆ ಪ್ರೋತ್ಸಾಹಧನ ಹೆಚ್ಚಿಸುವ ಜತೆಗೆ ಲೀಟರ್‌ಗೆ 30 ರೂ. ವಾಡಬೇಕು, ಬಗರ್‌ಹುಕುಂ ಸಾಗುವಳಿ ಚೀಟಿ ನೀಡಬೇಕು ಎಂದು ಒತ್ತಾಯಿಸಿದರು.
ಬ್ಲಾಕ್ ಅಧ್ಯಕ್ಷರ ಗೈರು: ಮುಳಬಾಗಿಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಹಬಾಜ್‌ಖಾನ್, ಆವನಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಆನಂದರೆಡ್ಡಿ, ಹಿರಿಯ ಮುಖಂಡ ಉತ್ತನೂರು ಶ್ರೀನಿವಾಸ್ ಸೇರಿ ಜಿಪಂ, ತಾಪಂ ಕಾಂಗ್ರೆಸ್ ಸದಸ್ಯರು ಪ್ರತಿಭಟನೆಯಿಂದ ದೂರ ಉಳಿದಿದ್ದರು.
ತಾಪಂ ವಾಜಿ ಅಧ್ಯಕ್ಷ ಎಂ.ವೆಂಕಟರವಣಪ್ಪ, ಕಿಸಾನ್‌ಕೇತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಸಿ.ಸುಭಾಷ್‌ಚಂದ್ರಗೌಡ, ಆವನಿ ಬ್ಲಾಕ್ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಎಚ್.ಗೊಲ್ಲಹಳ್ಳಿ ಪಿ.ಎಂ.ಸದಾಶಿವ, ಮುಳಬಾಗಿಲು ಬ್ಲಾಕ್ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಎಂ.ಶ್ರೀನಿವಾಸರೆಡ್ಡಿ, ಕಾಂಗ್ರೆಸ್ ಮುಳಬಾಗಿಲು ಎಸ್ಸಿ ಟಕ ಅಧ್ಯಕ್ಷ ಕಾರ್ಗಿಲ್ ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿದ್ದಟ್ಟ ಮುನಿಸ್ವಾಮಿಗೌಡ, ತಾಪಂ ವಾಜಿ ಸದಸ್ಯೆ ಬಿ.ಲಕ್ಷ್ಮೀದೇವಮ್ಮ, ಮುಖಂಡರಾದ ವಕೀಲ ಕವತನಹಳ್ಳಿ ಎಂ.ಜಿ.ವಿನೋದ್‌ಕುವಾರ್, ಡಾ.ಎಂ.ರಮೇಶ್, ತಾವರೆಕೆರೆ ನಾರಾಯಣರೆಡ್ಡಿ, ಹೆಬ್ಬಣಿ ಉದಯ್‌ಕುವಾರ್‌ರೆಡ್ಡಿ ಮತ್ತಿತರರು ಇದ್ದರು.