ಶ್ರದ್ಧಾಭಕ್ತಿಯಿಂದ ನಡೆದ ಕೋಲ

17sunti05..
Published on

ಕೊಡಗು : ಸುಂಟಿಕೊಪ್ಪ ಕೆದಕಲ್ ಭದ್ರಕಾಳೇಶ್ವರಿ ದೇವಾಲಯದ ವತಿಯಿಂದ ವಿಷ್ಣುಮೂರ್ತಿ ದೇವರ ಕಟ್ಟಿತೆರೆ ಹಾಗೂ ಕೋಲಗಳು ಶ್ರದ್ಧಾಭಕ್ತಿಯಿಂದ ನೂರಾರು ಭಕ್ತರ ಸಮ್ಮುಖದಲ್ಲಿ ಇತ್ತೀಚೆಗೆ ನಡೆಯಿತು. ತೆರೆಯ ಅಂಗವಾಗಿ ಭದ್ರಕಾಳೇಶ್ಚರಿ, ಈಶ್ವರ, ವಿಷ್ಣುಮೂರ್ತಿ ಹಾಗೂ ಅಜ್ಜಪ್ಪ ದೇವರ ಕೋಲ ಮತ್ತು ದರ್ಶನಗಳು ನಡೆದವು. ಇದೇ ಮೊದಲ ಬಾರಿಗೆ ವಿಷ್ಣುಮೂರ್ತಿಯ ಕಟ್ಟಿತೆರೆ ನಡೆದಿತ್ತು.


ವಿಷ್ಣುಮೂರ್ತಿ ದೇವರಿಗೆ ತೆರೆ ಕಟ್ಟುವ ಮೊದಲು ತೆರೆಯನ್ನು ಕೆದಕಲ್ ಮುಖ್ಯ ರಸ್ತೆಯಲ್ಲಿ ಕೇರಳದ ಚಂಡೆ ವಾದ್ಯ ದೊಂದಿಗೆ ಮೆರವಣಿಗೆ ನಡೆಸಲಾಯಿತು. ರಾತ್ರಿ ಮಹಾಮಂಗಳಾರತಿ ಭಂಡಾರ ಹಾಕುವುದು, ದೇವರ ಹರಕೆ ಸೇರಿದಂತೆ ವಿವಿಧ ಪೂಜಾ ಕೈಂಕಾರ್ಯಗಳು ನೆರವೇರಿದವು.
ಕೆದಕಲ್, ಬಾಳೆಕಾಡು, ಸುಂಟಿಕೊಪ್ಪ, ಹಾಲೇರಿ, ಬೋಯಿಕೇರಿ, ಮಡಿಕೇರಿ, ಕಾಂಡನಕೊಲ್ಲಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net