

ಮಡಿಕೇರಿ:
ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ ಡಿ.5ರಂದು ಕೊಡವ ಸಾಂಸ್ಕöÈತಿಕ ದಿನ ಮತ್ತು ಪುತ್ತರಿ ಕೋಲ್ ಮಂದ್ ನಮ್ಮೆಯನ್ನು ಆಚರಿಸಲಾಗುವುದು ಹಾಗೂ ಈ ಪ್ರಯುಕ್ತ ಕೊಡವ ಸಾಂಸ್ಕöÈತಿಕ ಮತ್ತು ಜಾನಪದ ಕಲೆ ಪೈಪೋಟಿಯನ್ನು ಏರ್ಪಡಿಸಲಾಗಿದೆ ಎಂದು ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ.ಮೋಟಯ್ಯ ತಿಳಿಸಿದರು.
ಸಮಾಜದ ಆವರಣದಲ್ಲಿ ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೊಡವ ಸಾಂಸ್ಕöÈತಿಕ ದಿನಾಚರಣೆಯ ಪ್ರಯುಕ್ತ ವರ್ಷಪ್ರತಿ ನಡೆಯುವಂತೆ ಬೊಳಕಾಟ್, ಉಮ್ಮತಾಟ್, ಪುತ್ತರಿ ಕೋಲಾಟ್, ಪರೆಯಕಳಿ, ವಾಲಗತಾಟ್, ಕಪ್ಪೆಯಾಟ್ ಪೈಪೋಟಿಯನ್ನು ಚಿಕ್ಕವರು ಮತ್ತು ದೊಡ್ಡವರು ಎಂಬ ಎರಡು ವಿಭಾಗದಲ್ಲಿ ನಡೆಸಲಾಗುವುದು. ಪೈಪೋಟಿಯು ಪೂರ್ವಾಹ್ನ 10 ಗಂಟೆಯಿAದ ಮಧ್ಯಾಹ್ನ 1 ಗಂಟೆವರೆಗೆ ಕೊಡವ ಸಮಾಜದ ಆವರಣದಲ್ಲಿ ನಡೆಯಲಿದೆ ಎಂದು ವಿವರಿಸಿದರು.
ಮಧ್ಯಾಹ್ನ 1.45 ರಿಂದ 2.15 ರವರೆಗೆ ಸಾಂಸ್ಕöÈತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ನಂತರ 2.15 ಗಂಟೆಗೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ.ಮೋಟಯ್ಯರವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟಿçಕಲ್ ಇನ್ಸೆ÷್ಪಕ್ಟರ್ ತೀತಿರ ರೋಷನ್ ಅಪ್ಪಚ್ಚು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ತೀತಿರ ರೋಷನ್ ಅಪ್ಪಚ್ಚು ಹಾಗೂ ಎರಡು ಡಾಕ್ಟರೇಟ್ ಪದವಿ ಪಡೆದಿರುವ ತೀತರಮಾಡ ಡಾ.ದೇವಕಿರವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ನಂತರ ಸಾಂಪ್ರದಾಯಿಕ ಪುತ್ತರಿ ಮಂದ್ ಮರೆಯೋ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.
ಸಾಂಸ್ಕöÈತಿಕ ಕಾರ್ಯಕ್ರಮದ ಪೈಪೋಟಿಗೆ ಹೆಸರನ್ನು ನ.30ರ ಒಳಗಾಗಿ ಪೊನ್ನಂಪೇಟೆ ಕೊಡವ ಸಮಾಜದ ಕಾರ್ಯಾಲಯದಲ್ಲಿ ನೀಡುವಂತೆ ಹಾಗೂ ದೂರವಾಣಿ ಸಂಖ್ಯೆ 08274249078 ಮತ್ತು 9880207640 ಕಚೇರಿ ಸಮಯದಲ್ಲಿ ನೋಂದಾಯಿಸಿಕೊಳ್ಳುವAತೆ ಮನವಿ ಮಾಡಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಚಿರಿಯಪಂಡ ಬೋಜಮ್ಮ, ಗೌರವ ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ, ಜಂಟಿ ಕಾರ್ಯದರ್ಶಿ ಅಲೇಮಾಡ ಡಿ.ಸುಧೀರ್, ಖಜಾಂಚಿ ಕಳ್ಳಿಚಂಡ ಕಟ್ಟಿ ಪೂಣಚ್ಚ ಇತರರು ಹಾಜರಿದ್ದರು