ಕೊಕ್ಕರ್ಣೆ ಸಿಂಡಿಕೇಟ್ ರೈತ ಸಂಘ ಗಣನೀಯ ಸಾಧನೆ

kon (1)
Published on

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ಕೊಕ್ಕರ್ಣೆ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂ ಪ್ರಸಕ್ತ ಸಾಲಿನಲ್ಲಿ ಒಟ್ಟು 1,142 ಕೋಟಿ ರೂ. ವ್ಯವಹಾರ ನಡೆಸಿದ್ದು, 175 ಕೋಟಿ ರೂ. ಠೇವಣಿ ಸಂಗ್ರಹಿಸಿ, 166 ಕೋಟಿ ಹೊರಬಾಕಿ ಸಾಲ ಹೊಂದಿದೆ. ಶೇ.97.75 ವಸೂಲಾತಿ ವಾಡಿದ್ದು 2.58 ಕೋಟಿ ರೂ. ನಿವ್ವಳ ಲಾಭ ಗಳಿಸಿ ಗಣನೀಯ ಸಾಧನೆ ವಾಡಿದೆ. ಸದಸ್ಯರಿಗೆ ಶೇ.18 ಲಾಭಾಂಶ ನೀಡಲಾಗಿದೆ ಎಂದು ಸಂದ ಅಧ್ಯಕ್ಷ ಅಶೋಕ್ ಕುವಾರ್ ಶೆಟ್ಟಿ ಮೈರ್ವಾಡಿ ಕರ್ಜೆ ಹೇಳಿದರು.

ಇಲ್ಲಿನ ನಾರಾಯಣಗುರು ಸಭಾಭವನ ಶಿವಗಿರಿಯಲ್ಲಿ ನಡೆದ ಸಂಘದ ವಾರ್ಷಿಕ ಸಾವಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂದ ಪ್ರಗತಿ, ಸಾಲ ಸೌಲಭ್ಯಗಳ ಬಗ್ಗೆ ನಿರ್ದೇಶಕ ಪ್ರತಾಪ್ ಹೆಗ್ಡೆ ವಾರಾಳಿ ಸದಸ್ಯರಿಗೆ ವಿವರಿಸಿದರು.

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಗಳಿಸಿದ 32 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿದ 178 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಭೆಯಲ್ಲಿ 10 ಲಕ್ಷ ರೂ.ಗೂ ಹೆಚ್ಚು ಪ್ರೋತ್ಸಾಹಧನ ವಿತರಿಸಲಾಯಿತು.

ಆಡಳಿತ ನಿರ್ದೇಶಕ(ಪ್ರಭಾರ)ಅಭಿಷೇಕ್ 2024-25ನೇ ಸಾಲಿನ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ಸಂದ ನಿರ್ದೇಶಕ ಮನೋಜ್‌ಕುವಾರ್ ಬಿ.ಶೆಟ್ಟಿ ಸ್ವಾಗತಿಸಿದರು. ಸಿಬ್ಬಂದಿ ಶಿಶಿರ್ ಕಾರ್ಯಕ್ರಮ ನಿರೂಪಿಸಿದರು.

ಸಂತೆಕಟ್ಟೆ ಶಾಖಾ ವ್ಯವಸ್ಥಾಪಕ ಶಂಕರ ಪೂಜಾರಿ ವಂದಿಸಿದರು. ಸಂದ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ವಂಡಾರು, ನಿರ್ದೇಶಕರಾದ ಶುಭಕರ ಶೆಟ್ಟಿ, ಪ್ರಸನ್ನ ಶೆಟ್ಟಿ ಹಳ್ಳಿ, ಪ್ರತಾಪ ಹೆಗ್ಡೆ ವಾರಾಳಿ, ಉದಯಕುಮಾರ್ ಶೆಟ್ಟಿ, ಮಂಜುನಾಥ ಹೆಗ್ಡೆ ಆವರ್ಸೆ, ದಯಾನಂದ ನಾಯ್ಕ ತಡಾಲು, ರವಿ ಪೂಜಾರಿ, ಮನೋಜ್‌ಕುವಾರ್ ಬಿ.ಶೆಟ್ಟಿ ಕಳ್ತೂರು, ಡಾ.ಸುನೀತಾ ಡಿ.ಶೆಟ್ಟಿ ಕೆಂಜೂರು, ಹೇವಾವತಿ ಶೆಟ್ಟಿ ವಾರಾಳಿ, ಕಮಲ ಯಾನೆ ಶಾರದಾ ನಾಲ್ಕೂರು, ಚಂದ್ರಶೇಖರ ಪೂಜಾರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net