ಕೊಕ್ಕರ್ಣೆ ರೋಟರಿ ಪದಪ್ರದಾನ ಕಾರ್ಯಕ್ರಮ

kon (1)
Published on

ಕೊಕ್ಕರ್ಣೆ: ರೋಟರಿ ಕ್ಲಬ್ ಕೊಕ್ಕರ್ಣೆಯ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ ಇತ್ತೀಚೆಗೆ ಮಂದಾರ್ತಿಯ ಸಪ್ತಪದಿ ಕನ್ವೆನ್ಶನ್ ಹಾಲ್ ಮೈರ್‌ಕೊಮೆಯಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಅರುಣಕುವಾರ್ ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ಆಯ್ಕೆಯಾದ ಸಿ.ವಿಶ್ವನಾಥ ಶೆಟ್ಟಿ ಅವರಿಗೆ ಪದ್ಮನಾಭ ಕಾಂಚನ್ ಪದಪ್ರದಾನ ನೆರವೇರಿಸಿದರು. ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಶೈಕ್ಷಣಿಕ ವೆಚ್ಚ ನೀಡಲಾಯಿತು. ವಾಜಿ ಅಧ್ಯಕ್ಷ ರುರಾಮ ಎಂ.ಎಚ್. ಮೂರು ವಿದ್ಯಾರ್ಥಿಗಳಿಗೆ ಒಂದು ವರ್ಷದ ಶೈಕ್ಷಣಿಕ ವೆಚ್ಚದ ಮೊತ್ತದ ಚೆಕ್ ವಿತರಿಸಿದರು.

ನಿರ್ಗಮನ ಸಹಾಯಕ ಗವರ್ನರ್ ರಾವೇಂದ್ರ ಸಾಮಗ, ನಿರ್ಗಮನ ವಲಯ ಸೇನಾನಿ ದಿನೇಶ್‌ಕುವಾರ್, ಜಿಲ್ಲಾ ಗವರ್ನರ್ ಬಿ.ಎಂ.ಭಟ್, ಅಸಿಸ್ಟೆಂಟ್ ಗವರ್ನರ್ ಆನಂದ ಶೆಟ್ಟಿ, ವಲಯ ಸೇನಾನಿ ಹರೀಶ್‌ಕುಂದರ್, ಸ್ಥಾಪಕ ಅಧ್ಯಕ್ಷ ಪ್ರಸಾದ್ ಹೆಗ್ಡೆ ವಾರಾಳಿ, ಕ್ಲಬ್ ಸಲಹೆಗಾರ ಉದಯ್‌ಕುವಾರ್ ಶೆಟ್ಟಿ, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಅಧ್ಯಕ್ಷ ಕಾಶಿನಾಥ್ ಶೆಣೈ ಕಜ್ಕೆ ಸ್ವಾಗತಿಸಿದರು. ವಾಸುದೇವ ಶೆಟ್ಟಿ, ಅವಿನಾಶ್ ರಾವ್, ರವಿಕುವಾರ್ ವಾರಾಳಿ, ಸುರೇಶ್ ನಾಯಕ್ ಅತಿಥಿಗಳನ್ನು ಪರಿಚಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net