

ಕೊಕ್ಕರ್ಣೆ: ಕೊಕ್ಕರ್ಣೆ ರೈತ ಉತ್ಪಾದಕ ಕಂಪೆನಿಯ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಕೊಕ್ಕರ್ಣೆ ನಾರಾಯಣ ಗುರು ಸಭಾಭವನದಲ್ಲಿ ನಡೆಯಿತು. ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಸುನೀಲ್‌ಕುವಾರ್ ಉದ್ಘಾಟಿಸಿದರು. ಕಂಪನಿ ಅಧ್ಯಕ್ಷ ಕೊಕ್ಕಣೆ ಸಂಜೀವ ವಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಕರ್ಜೆ ರಾಮಕೃಷ್ಣ ಭಟ್, ಕೊಕ್ಕರ್ಣೆ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂ ವಾಜಿ ಆಡಳಿತ ನಿರ್ದೇಶಕ ಸಂತೆಕಟ್ಟೆ ಎಂ.ಡಿ.ಕಾಮತ್, ಅನಂತವಿಕ್ರಮ ಉಡುಪ, ವಾಜಿ ಅಧ್ಯಕ್ಷ ಹೊರ್ಲಾಳಿ ವಿಶ್ವನಾಥ ಅಡಿಗ, ಹಾಲಿ ನಿರ್ದೇಶಕ ಭಾಸ್ಕರ ಪೂಜಾರಿ ಹಾಗೂ ಹಲುವಳ್ಳಿ ರತ್ನಾಕರ ಶೆಟ್ಟಿ ಸಲಹೆ ಸೂಚನೆಗಳನ್ನು ನೀಡಿದರು. ನಿರ್ದೇಶಕರಾದ ಕರ್ಜೆ ಹೊಳೆಬಾಗಿಲು ಬಾಲಕೃಷ್ಣ ಶೆಟ್ಟಿ, ಹಲುವಳ್ಳಿ ಕಮಲಾಕ್ಷ ಪ್ರಭು, ಹಂದಾಡಿ ರವಿರಾಜ ಶೆಟ್ಟಿ, ಮುದ್ದೂರು ಕಮಲಾ, ಅಶೋಕ ಶೆಟ್ಟಿ ಉಪಸ್ಥಿತರಿದ್ದರು. ವಾಧವ ಪೈ ಸ್ವಾಗತಿಸಿದರು. ನಾಗರಾಜ ನಾಯ್ಕ ವಾರ್ಷಿಕ ವರದಿ ಮತ್ತು ಅಡಿಟ್ ವರದಿ ವಾಚಿಸಿದರು. ಜ್ಯೋತಿ ಎಂ. ಪ್ರಭು ಪ್ರಾರ್ಥಿಸಿ, ವಿಶ್ವನಾಥ ಶೆಟ್ಟಿ ನಿರೂಪಿಸಿ, ವಂದಿಸಿದರು.