ಕ್ರೀಡೆಯಲ್ಲಿ ಕೊಕಾಟಿ ಶಾಲೆ ಸಾಧನೆ

IMG-20251106-WA0012.jpg
Published on

ಹುಬ್ಬಳ್ಳಿ: ಸಾರ್ವಜನಿಕ ಶಿಕ್ಷಣ ಇಲಾಖೆಯು ಇತ್ತೀಚೆಗೆ ಏರ್ಪಡಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿಯ ಉಣಕಲ್ಲ ತರಳಬಾಳು ಕ್ಯಾಂಪಸ್ ನಲ್ಲಿರುವ ಆರ್.ಕೆ. ಕೊಕಾಟಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಸಿದ್ದು ಜಾಲಗಾರ ಚಕ್ರ ಎಸೆತ ಪ್ರಥಮ, ಕೀರ್ತಿ ಜಾಲಗಾರ ಗುಂಡು ಎಸೆತ ದ್ವೀತಿಯ ಹಾಗೂ ಕಮರಾನ್ ನದಾಫ್ ಜಾವಲಿನ್ ಎಸೆತದಲ್ಲಿ ದ್ವೀತಿಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸರಪಳಿ ಗುಂಡು ಹಾಗೂ ಚಕ್ರ ಎಸೆತದಲ್ಲಿ ರಂಜನ್ ಅಂಗಡಿ ತೃತೀಯ ಸ್ಥಾನ ಪಡೆದು ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಎಚ್.ಬಿ. ಉಪ್ಪಾರ ತರಬೇತಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net