ಹುಬ್ಬಳ್ಳಿ: ಸಾರ್ವಜನಿಕ ಶಿಕ್ಷಣ ಇಲಾಖೆಯು ಇತ್ತೀಚೆಗೆ ಏರ್ಪಡಿಸಿದ್ದ ಗೋಪನಕೊಪ್ಪ ವಲಯ ಮಟ್ಟದ ಕ್ರೀಡಾಕೂಟದಲ್ಲಿ ನಗರದ ಉಣಕಲ್ಲ ಆರ್.ಕೆ. ಕೊಕಾಟಿ ಪ್ರೌಢಶಾಲೆ ಮಕ್ಕಳು ಅತೀ ಹೆಚ್ಚು ಬಹುಮಾನ ಪಡೆದು, ಗುಂಪು ಮತ್ತು ವೈಯಕ್ತಿಕ ಆಟಗಳಲ್ಲಿ ಸಮಗ್ರ ವಿರಾಗ್ರಣಿಗೆ ಪಾತ್ರರಾಗಿದ್ದಾರೆ. ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ವಿಭಾಗದಲ್ಲಿ ಚೇತನ್ ಅಂಗಡಿ 800 ಮೀಟರ್ ಓಟ ಪ್ರಥಮ, 3ಸಾವಿರ ಮೀಟರ್ ಓಟ ಪ್ರಥಮ, ರಂಜನ್ ಅಂಗಡಿ ಚಕ್ರ ಎಸೆತ ಪ್ರಥಮ, ಜಾವಲಿನ್ ದ್ವೀತಿಯ, ಸರಪಳಿ ಗುಂಡು ಎಸೆತ ಪ್ರಥಮ, ಕಂರಾನ್ ನದಾಫ್ ಗುಂಡು ಎಸೆತ, ಜಾವಲಿನ್ ಪ್ರಥಮ, ಯೋಗೇಶ ಹಿರೇಮಠ 400 ಮೀಟರ್ ಓಟ ಪ್ರಥಮ, 3ಸಾವಿರ ಮೀಟರ್ ಓಟ ದ್ವೀತಿಯ, ಸಿದ್ದು ಜಾಲಗಾರ್ ಚಕ್ರ ಎಸೆತ ದ್ವೀತಿಯ, ಗುಂಡು ಎಸೆತ ತೃತೀಯ, ಮಹಮ್ಮದ ಇಬ್ರಾಹಿಂ 200 ಮೀಟರ್ ಓಟ ತೃತೀಯ, ಗೌತಮ್ ಜಾಲಗಾರ್ 400 ಮೀಟರ್ ಓಟ ತೃತೀಯ, ರಿಲೇ ದ್ವೀತಿಯ ಸ್ಥಾನ.
ಬಾಲಕಿಯರ ವಿಭಾಗದಲ್ಲಿ ದಿವ್ಯಾ ಚಿಲ್ಲಣ್ಣನವರ 100 ಮೀಟರ್ ಓಟ, 1500 ಮೀಟರ್ ಓಟ ಪ್ರಥಮ, ಕೀತಿರ್ ಜಾಲಗಾರ್ ಗುಂಡು ಎಸೆತ ಪ್ರಥಮ, ಚಕ್ರ ಎಸೆತ ದ್ವೀತಿಯ, 1500 ಮೀಟರ್ ಓಟ ದ್ವೀತಿಯ, ಮಂಜುಳಾ ಗೊಲ್ಲರ ಗುಂಡು ಎಸೆತ ದ್ವೀತಿಯ, ಸಂಗೀತಾ ಲಮಾಣಿ 200 ಮೀಟರ್ ಓಟ ಪ್ರಥಮ, 100 ಮೀಟರ್ ತೃತೀಯ, ಪೂಣಂ ಮಾಳ್ವದೆ 200 ಮೀಟರ್ ತೃತೀಯ, ನಿರ್ಮಲಾ ಕಳಸಣ್ಣವರ ನಡಿಗೆ ಪ್ರಥಮ, ಪವಿತ್ರಾ ಬಾದಾಮಿ 3 ಸಾವಿರ ಮೀಟರ್ ಓಟ ಪ್ರಥಮ, ವಿಜಯಲಕ್ಷ್ಮಿರೋಣಿಮಠ ನಡಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ಎರಡು ವಿಭಾಗ ರಿಲೇಯಲ್ಲಿ ಶಾಲೆ ಮಕ್ಕಳು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ದೈಹಿಕ ಶಿಕ್ಷಣ ಶಿಕ್ಷಕ ಎಚ್.ಬಿ. ಉಪ್ಪಾರ್ ತಿಳಿಸಿದ್ದಾರೆ.