

ಹುಬ್ಬಳ್ಳಿ: ಇಲ್ಲಿನ ಉಣಕಲ್ಲ ಟೀಚರ್ಸ್ ಕಾಲನಿಯಲ್ಲಿರುವ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆರ್.ಕೆ. ಕೋಕಾಟೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.
ಪರೀಕ್ಷೆಗೆ ಕುಳಿತ 49 ವಿದ್ಯಾರ್ಥಿಗಳಲ್ಲಿ 2 ಡಿಸ್ಟಿಂಕ್ಷನ್, 24 ಪ್ರಥಮ ದರ್ಜೆ, 16 ದ್ವೀತಿಯ ದರ್ಜೆ ಮೂವರು ತೃತೀಯ ದರ್ಜೆಯಲ್ಲಿ ಉತ್ತಿರ್ಣರಾಗಿದ್ದು, ಶಾಲೆ ಒಟ್ಟು ಫಲಿತಾಂಶ ಶೇ. 92ರಷ್ಟು ದಾಖಲಾಗಿದೆ.
ಮನೋಜ ಹೊಂಬಳ ಶೇ. 87.36 ಪ್ರಥಮ, ಅನುಪಮ ಚಿಗರಿ 85.12 ದ್ವೀತಿಯ ಹಾಗೂ ಮನ್ಸೂರ ನದಾಫ್ 82.56 (ಹಿಂದಿ- 100) ತೃತೀಯ ಸ್ಥಾನ ಹಾಗೂ ಕನ್ನಡ ವಿಷಯಕ್ಕೆ ಅನಿತಾ ಕಡೇಮನಿ ಹಾಗೂ ಅಪೂರ್ವ ಮ್ಯಾದಗೊಪ್ಪ ಅವರು 125 ಪೂರ್ಣ ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.