

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಸುಕ್ಷೇತ್ರ ಕೊಕಟನೂರ ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮದೇವಿಯ ಜಾತ್ರಾ ಮಹೋತ್ಸವ ಬುಧವಾರ ಆರಂಭವಾಗಿದ್ದು, ಕರ್ನಾಟಕ ಸೇರಿ ನೆರೆ ರಾಜ್ಯದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿ ದರ್ಶನ ಪಡೆದರು.
ಬೆಳಗ್ಗೆ ದೇವಿಗೆ ಅಭಿಷೇಕ ಹಾಗೂ ವಿಶೇಷ ಅಲಂಕಾರ ಪೂಜೆ ಜರುಗಿತು. ಜಾತ್ರೆ ಭದ್ರತೆಗಾಗಿ ಓರ್ವ ಡಿವೈಎಸ್‌ಪಿ, ಐವರು ಸಿಪಿಐ, 24 ಪಿಎಸ್‌ಐ ಹಾಗೂ 330 ಪುರುಷ ಹಾಗೂ ಮಹಿಳಾ ಸಿಬ್ಬಂದಿ ಮತ್ತು 2 ಕೆಎಸ್‌ಆರ್‌ಪಿ, 2 ಡಿಆರ್ ತಂಡ ನಿಯೋಜಿಸಲಾಗಿದೆ. ಜಾತ್ರೆ ನಿಮಿತ್ತ ತೆಂಗಿನಕಾಯಿ, ಹೂವು ಹಾಗೂ ತಿನಿಸುಗಳ ದರದಲ್ಲಿ ಏರಿಕೆ ಕಂಡುಬಂದಿದೆ.