ಸುಸ್ಥಿರ ಪ್ರವಾಸೋದ್ಯಮಕ್ಕೆ ಕೊಹೆರಾ ಒತ್ತು

kohira
Published on

ಮಡಿಕೇರಿ: ಸುಸ್ಥಿರ ಹಾಗೂ ಜವಾಬ್ದಾರಿಯುತ ಪ್ರವಾಸೋದ್ಯಮ ವಲಯವನ್ನು ಸೃಷ್ಟಿಸಿ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಪ್ರಯತ್ನಗಳನ್ನು ನಡೆಸಲಾಗುವುದು ಎಂದು ಕೂರ್ಗ್ ಹೊಟೇಲ್ಸ್ ಮತ್ತು ರೆಸಾರ್ಟ್ಸ್ ಅಸೋಸಿಯೇಷನ್(ಕೊಹೆರಾ) ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೊಹೆರಾ ಅಸೋಸಿಯೇಷನ್‌ನ ನೂತನ ಲೋಗೋ ಅನಾವರಣ ಮಾಡಿ ಮಾತನಾಡಿದ ಅವರು, ೧೯೯೦ರಲ್ಲಿ ಆರಂಭಗೊಂಡ ಕೊಡಗು ಜಿಲ್ಲಾ ಹೊಟೇಲ್, ರೆಸ್ಟೋರೆಂಟ್ ಹಾಗೂ ರೆಸಾರ್ಟ್ ಅಸೋಸಿಯೇಷನ್ ಹೆಸರನ್ನು ಕೂರ್ಗ್ ಹೊಟೇಲ್ಸ್ ಮತ್ತು ರೆಸಾರ್ಟ್ಸ್ ಅಸೋಸಿಯೇಷನ್(ಕೊಹೆರಾ) ಎಂದು ಬದಲಿಸಿ ಪದಾಧಿಕಾರಿಗಳನ್ನು ನೇಮಿಸಿ ಸಮಿತಿ ರಚನೆ ಮಾಡಲಾಗಿದೆ. ಅತಿಥಿ ಸತ್ಕಾರ ಉದ್ಯಮವನ್ನು ಜವಾಬ್ದಾರಿಯುತವಾಗಿ ಮುನ್ನಡೆಸುವ ಧ್ಯೇಯ ನಮ್ಮದಾಗಿದೆ. ಈ ಹಿನ್ನೆಲೆ ಉತ್ಸಾಹಿ, ಕಾರ್ಯೋನ್ಮುಖ ಸದಸ್ಯರನ್ನು ಸೇರಿಸಿಕೊಂಡು ಉತ್ತಮ ಭವಿಷ್ಯದತ್ತ ವಲಯವನ್ನು ಕೊಂಡೊಯ್ಯುವ ಭರವಸೆಯೊಂದಿಗೆ ಮುನ್ನಡೆಯಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ನಾಸೀರ್ ಅಹಮ್ಮದ್, ಸಂಘದ ಸಲಹೆಗಾರ ಬಿ.ಆರ್.ನಾಗೇಂದ್ರ ಪ್ರಸಾದ್ , ಉಪಾಧ್ಯಕ್ಷ ಮಂಜುನಾಥ್, ಜಹೀರ್ ಅಹ್ಮದ್, ಖಜಾಂಜಿ ಸಾಗರ್ ಗಣಪತಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net