ಚಿರತೆ ದಾಳಿಗೆ ಎರಡು ಆಡು ಬಲಿ

Published on

ಕೊಳ್ಳೇಗಾಲ : ತಾಲೂಕಿನ ಜಾಗೇರಿ ಪಾಸ್ಕಲ್ ನಗರದ ಜಮೀನಿನಲ್ಲಿ ಚಿರತೆ ದಾಳಿಗೆ 2 ಆಡು ಮರಿಗಳು ಬಲಿಯಾಗಿವೆ.
ಪಾಸ್ಕಲ್ನ ವಿಲ್ಸನ್ ಅಭಿಷೇಕ್ ಎಂಬುವರಿಗೆ ಸೇರಿದ ಆಡು ಮರಿಗಳು ಸೋಮವಾರ ಮಧ್ಯಾಹ್ನ ಮೇಯುತ್ತಿದ್ದಾಗ ಚಿರತೆ ದಾಳಿ ನಡೆಸಿದೆ.
ರೈತರಿಂದ ದೂರು: ಚಿರತೆ ಹಾವಳಿ ಹೆಚ್ಚಾದ ಪರಿಣಾಮ ಜು.22 ರಂದು ಕರ್ನಾಟಕ ರಾಜ್ಯ ರೈತ ಸಂಘದ ಘಟಕದಿಂದ ಕೊಳ್ಳೇಗಾಲ ಬಫರ್ ವಲಯದ ಆರ್‌ಎಫ್‌ಒ ಭರತ್ ಅವರಿಗೆ ಅರ್ಜಿ ಸಲ್ಲಿಸಲಾಗಿದೆ. ಪಾಸ್ಕಲ್ ನಗರದ ಆಗಸ್ಟೀನರ್ ಪ್ರಾಥಮಿಕ ಮತ್ತು ಪ್ರೌಢಶಾಲೆ ಮುಖ್ಯ ಶಿಕ್ಷಕರೂ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಕ್ರಮ ವಹಿಸಲು ಒತ್ತಾಯಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net