ಕೊಂಡೋತ್ಸವದ ಸೌದೆ ಮೆರವಣಿಗೆ

03 yelandur 02
ಯಳಂದೂರು ತಾಲೂಕಿನ ಯರಿಯೂರು ಗ್ರಾಮದ ಅಂಬೇಡ್ಕರ್ ಭವನದ ಮುಂಭಾಗ ನಡೆಯಲಿರುವ ಕೊಂಡೋತ್ಸವಕ್ಕೆ ಸೋಮವಾರ ಸೌದೆಯನ್ನು ಮರೆವಣಿಗೆ ಮೂಲಕ ಕೊಂಡೊಯ್ಯಲಾಯಿತು.
Published on

ಯಳಂದೂರು: ತಾಲೂಕಿನ ಯರಿಯೂರು ಗ್ರಾಮದ ಅಂಬೇಡ್ಕರ್ ಸಮುದಾಯ ಭವನದ ಮುಂಭಾಗ ನಡೆಯಲಿರುವ ಮಂಟೇಸ್ವಾಮಿ ಕೊಂಡೋತ್ಸವಕ್ಕೆ ಸೋಮವಾರ ಸೌದೆಯನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.

ಅಲಂಕೃತ ಎತ್ತಿನಗಾಡಿಗಳು, ಟ್ರ್ಯಾಕ್ಟರ್ ಹಾಗೂ ಲಗೇಜ್ ಆಟೋಗಳಲ್ಲಿ ತಾಲೂಕಿನ ಗುಂಬಳ್ಳಿ ಗ್ರಾಮದಿಂದ ಸೌದೆಯನ್ನು ಯಳಂದೂರು ಪಟ್ಟಣದ ಮೂಲಕ ಯರಿಯೂರು ಗ್ರಾಮಕ್ಕೆ ಕೊಂಡೊಯ್ಯಲಾಯಿತು. ಫೆ.17ರಂದು ಯರಿಯೂರು ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭನವದ ಮುಂಭಾಗ ಮಂಟೇಸ್ವಾಮಿ ಕೊಂಡೋತ್ಸವ ನಡೆಯಲಿದೆ. ಇದಕ್ಕೆ ಪ್ರತಿ ವರ್ಷವೂ ಸೌದೆಯನ್ನು ತರುವಾಗ ಮೆರವಣಿಗೆ ಮಾಡಿ ಗ್ರಾಮಕ್ಕೆ ಕೊಂಡೊಯ್ಯುವ ವಾಡಿಕೆ ಇದೆ. ಅದರಂತೆ ಸೋಮವಾರ ರಸ್ತೆಯುದ್ದಕ್ಕೂ ಪಟಾಕಿ ಸಿಡಿಸಿ, ಮಂಗಳವಾದ್ಯ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ದೇವರ ಕುಣಿತವನ್ನು ಮಾಡುವ ಮೂಲಕ ಸೌದೆಯನ್ನು ಮೆರವಣಿಗೆ ಮಾಡಲಾಯಿತು.

03ವೈಎಲ್‌ಡಿ ಚಿತ್ರ02 ಯಳಂದೂರು ತಾಲೂಕಿನ ಯರಿಯೂರು ಗ್ರಾಮದ ಅಂಬೇಡ್ಕರ್ ಭವನದ ಮುಂಭಾಗ ನಡೆಯಲಿರುವ ಕೊಂಡೋತ್ಸವಕ್ಕೆ ಸೋಮವಾರ ಸೌದೆಯನ್ನು ಮರೆವಣಿಗೆ ಮೂಲಕ ಕೊಂಡೊಯ್ಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net