

ಮಂಗಳೂರು : ನವದೆಹಲಿಯಲ್ಲಿ ನೂತನ ಸಂಸತ್ ಭವನದ ಯಶಸ್ವಿ ಜವಾಬ್ದಾರಿ ನಿರ್ವಹಿಸಿದ ಟಾಟಾ ಪ್ರಾಜೆಕ್ಟ್‌ನ ಎಂಡಿ ಮತ್ತು ಸಿಇಒ ವಿನಾಯಕ ಪೈ ಅವರು ಕೊಡಿಯಾಲ್ ಸ್ಪೋರ್ಟ್ಸ್ ಅಸೋಸಿಯೇಷನ್ ಜಿಪಿಎಲ್ ಉತ್ಸವ್ 2024 ವರ್ಷದ ವ್ಯಕ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸನ್ಮಾನ ಸೀಕರಿಸಿ ಮಾತನಾಡಿದ ಅವರು ‘ ಜಿಪಿಎಲ್ ಉತ್ಸವ ಯುವ ಪ್ರತಿಭೆಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಸಮಾಜದ
ಏಳಿಗೆಯಲ್ಲಿ ಯುವಕರು ತಮ್ಮದೇ ರೀತಿಯ ಮಾದರಿ ಕೊಡುಗೆ ನೀಡುವಂತೆ ಮಾಡುವಲ್ಲಿ ಶ್ರಮಿಸುತ್ತಿರುವುದು ಶ್ರೇಷ್ಠ ಕಾರ್ಯ ಎಂದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ‘ ಮಂಗಳೂರಿನ ಹೃದಯ ಭಾಗದಲ್ಲಿ 75 ಸೆಂಟ್ಸ್ ಜಾಗದಲ್ಲಿ ಕ್ರೀಡಾ ಚಟುವಟಿಕೆ ನಡೆಸಲು ಕಟ್ಟಡ ನಿರ್ಮಾಣ ಹಾಗೂ ಮೂಲ್ಕಿ ಸಮೀಪ ನದಿ ತಟದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಕೊಡಿಯಾಲ್ ಸ್ಪೋರ್ಟ್ಸ್ ಅಸೋಸಿಯೇಷನ್‌ನ ಗುರಿಯಾಗಿದೆ ಎಂದರು. ದ.ಕ. ಸಂಸದ ಶುಭ ಹಾರೈಸಿದರು.
ಪ್ರಧಾನ ಪ್ರಾಯೋಜಕರಾದ ಡಾ. ದೀಪಕ್ ಭಾಸ್ಕರ ಶೆಣೈ, ಮಾಜಿ ಕ್ರಿಕೆಟ್ ಆಟಗಾರ ದಿನೇಶ್, ಉದ್ಯಮಿಗಳಾದ ಪ್ರದೀಪ್ ಜಿ ಪೈ, ಸುಬ್ರಾಯ ಪೈ, ನಿತ್ಯಾನಂದ ಪೈ, ಜಯಂತ್ ಪೈ, ಗಣೇಶ್ ಕಾಮತ್, ಅನಂತ್ ಕಾಮತ್, ಅತುಲ್ ಕುಡ್ವಾ, ರಾಜೇಶ್ ಪೈ, ವರದರಾಜ್ ಪೈ, ನರೇಂದ್ರನಾಥ್ ನಾಯಕ್, ದಿನೇಶ್ ಪೈ, ಸುಮಿತ್ ಭಟ್, ರಾಹುಲ್ ಕುಡ್ವಾ, ನಾಗೇಂದ್ರ ಪೈ, ದೀಪಾ ಪೈ, ಸಿಎ ಎಸ್.ಎಸ್.
ನಾಯಕ್, , ಸಿಎ ಗೌತಮ್ ಪೈ , ವಿಶಾಲ್, ಜನಾರ್ದನ್, ಪ್ರಮುಖರಾದ ಹನುಮಂತ ಕಾಮತ್, ಮಂಗಲ್ಪಾಡಿ ನರೇಶ್ ಶೆಣೈ, ಚೇತನ್ ಕಾಮತ್, ನರೇಶ್ ಪ್ರಭು ಉಪಸ್ಥಿತರಿದ್ದರು. ಕಿರಣ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.