ಕೊಡಿಯಾಲ ಸರ್ಕಾರಿ ಬಸ್ ಸಂಚಾರ ಆರಂಭ

New Project (2)
Published on

ಸುಳ್ಯ: ಬಹು ಕಾಲದ ಬೇಡಿಕೆಯಾದ ಬೆಳ್ಳಾರೆ-ಕಲ್ಪಣೆ ಪೊಟ್ರೆ ಕೊಡಿಯಾಲ ಗ್ರಾಮಕ್ಕೆ ಸರ್ಕಾರಿ ಬಸ್ ವ್ಯವಸ್ಥೆ ಮಂಗಳವಾರ ಪ್ರಾರಂಭಗೊಂಡಿತು. ಸರ್ಕಾರದ ಗ್ಯಾರಂಟಿ ಅನುಷ್ಠಾನ ಸಮಿತಿ ಸುಳ್ಯ ತಾಲೂಕು ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.

ಕಲ್ಪಣೆ, ಪೊಟ್ರೆ, ಕೊಡಿಯಾಲ ಭಾಗಗಳಿಂದ ಬೆಳ್ಳಾರೆ ಪೇಟೆಗೆ ವಿದ್ಯಾಭ್ಯಾಸ, ವ್ಯವಹಾರಕ್ಕಾಗಿ ಬರುವ ಜನರಿಗೆ ಸರ್ಕಾರಿ ಬಸ್ ವ್ಯವಸ್ಥೆ ಇರಲಿಲ್ಲ. ಜನರು ದುಬಾರಿ ಬೆಲೆ ತೆತ್ತು ಖಾಸಗಿ ವಾಹನಗಳಲ್ಲಿ ಬರಬೇಕಾಗಿತ್ತು. ಇದರಿಂದ ಸಾರ್ವಜನಿಕರು ಕಷ್ಟ ಪಡಬೇಕಾದ ಪರಿಸ್ಥಿತಿ ಇತ್ತು. ಸರ್ಕಾರಿ ಬಸ್‌ಗಾಗಿ ಇಲ್ಲಿನ ಸಾರ್ವಜನಿಕರು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ ಪರಿಣಾಮವಾಗಿ ಬಸ್ ವ್ಯವಸ್ಥೆ ಕಲ್ಪಿಸಿದಂತಾಗಿದೆ. ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net