

ತುಮಕೂರು: ಡೆಂ ಸೇರಿದಂತೆ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದ್ದು ಗುಬ್ಬಿ ತಾಲೂಕು ತ್ಯಾಗಟೂರು ಗ್ರಾಪಂ ಸಿಬ್ಬಂದಿಗೆ ಇದರ ಅರಿವೇ ಇಲ್ಲವೆಂಬಂತೆ ಕಾಣುತ್ತಿದೆ. ಗ್ರಾಪಂ ವ್ಯಾಪ್ತಿಯ ಕೋಡಿನಾಗೇನಹಳ್ಳಿಯ ಎ.ಕೆ.ಕಾಲನಿಯಲ್ಲಿ ತ್ಯಾಜ್ಯ, ಮಳೆ ನೀರು ಹರಿಯುವ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ತುಂಬೆಲ್ಲಾ ಹರಿಯುತ್ತಿರುವ ಮನೆಗಳ ತ್ಯಾಜ್ಯ ನೀರಿನಲ್ಲೇ ಗ್ರಾಮಸ್ಥರು ಓಡಾಡುತ್ತಿದ್ದು ಸ್ವಚ್ಛತೆ, ನೈರ್ಮಲ್ಯ ಕಾಪಾಡಬೇಕಿರುವ ಗ್ರಾಪಂ ಸಿಬ್ಬಂದಿ ಮಾತ್ರ ಕಣ್ಮುಚ್ಚಿಕುಳಿತಿದೆ.
ಎ.ಕೆ.ಕಾಲನಿಯ ಒಂದು ಬೀದಿಯಲ್ಲಿ 15ಕ್ಕು ಹೆಚ್ಚು ಮನೆಯಿದ್ದು ಚರಂಡಿ ನಿರ್ಮಿಸಿಲ್ಲ. ಹಾಗಾಗಿ, ಮನೆಗಳ ತ್ಯಾಜ್ಯ ನೀರು ರಸ್ತೆ ತುಂಬೆಲ್ಲಾ ಹರಿಯುತ್ತಿದೆ. ಮಳೆಗಾಲದಲ್ಲಂತು ತ್ಯಾಜ್ಯ ನೀರಿನ ಜತೆ ಮಳೆ ನೀರು ಸೇರಿ ಮನೆಗಳಿಗೆ ನುಗ್ಗಿ ರೋಗರುಜಿನಗಳು ಹೆಚ್ಚಲು ಕಾರಣವಾಗಿದೆ. ಈ ಬಗ್ಗೆ ಹತ್ತಾರುಬಾರಿ ಗ್ರಾಪಂಗೆ ದೂರು ನೀಡಿದರೂ ಏನೂ ಪ್ರಯೋಜನವಾಗಿಲ್ಲ.
ಮಕ್ಕಳ ಆರೋಗ್ಯ ಕಳವಳ: ಈ ಬೀದಿಯಲ್ಲಿರುವ ಮನೆಗಳಲ್ಲಿನ ಮಕ್ಕಳ ಆರೋಗ್ಯದ ಬಗ್ಗೆ ಸಾಕಷ್ಟು ಕಳವಳ ಇದೆ. ಮನೆ ತ್ಯಾಜ್ಯ ನೀರಿನ ಜತೆಗೆ ಕುಡಿಯುವ ನೀರು ಕೊಡುವ ಪೈಪ್ ಸಹ ಇದ್ದು ಇದು ಸಾಕಷ್ಟು ಆತಂಕಕ್ಕು ಕಾರಣವಾಗಿದೆ. ಇತ್ತೀಚೆಗೆ ಮಧುಗಿರಿ ತಾಲೂಕು ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರು ಸೇವನೆಯಿಂದ 7ಕ್ಕು ಹೆಚ್ಚು ಮಂದಿ ಬಲಿಯಾಗಿದ್ದು ಈ ದುರಂತ ಕಣ್ಮುಂದೆ ಇದ್ದರು ಗ್ರಾಪಂ ದಿವ್ಯ ರ್ನಿಲಕ್ಷ$್ಯ ತಾಳಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಮಕ್ಕಳು ಶಾಲೆಗಳಿಗೆ ಹೋಗಬೇಕಾದರೆ ಮೂಗು ಮುಚ್ಚಿಕೊಂಡೇ ಕೊಳಚೆ ನೀರಲ್ಲೇ ಓಡಾಡಬೇಕಿದೆ. ಇನ್ನಾದರೂ ಗ್ರಾಪಂ ಎಚ್ಚೆತ್ತುಕೊಂಡು ಚರಂಡಿ ನಿರ್ಮಿಸಿ ಮನೆಗಳ ತ್ಯಾಜ್ಯ ನೀರು ಸರಾಗವಾಗಿ ಹರಿಯುವಂತೆ ಕ್ರಮವಹಿಸಲಿ ಎಂಬುದು ಗ್ರಾಮಸ್ಥರು ಒತ್ತಾಯವಾಗಿದೆ.
ನಮ್ಮ ಕಾಲನಿಯ ರಸ್ತೆಯಲ್ಲಿ 15ಕ್ಕು ಹೆಚ್ಚು ಮನೆಗಳಿವೆ. ಮನೆಗಳ ತ್ಯಾಜ್ಯ ನೀರು ಹರಿಯಲು ಚರಂಡಿ ನಿರ್ಮಿಸಿಲ್ಲ. ಇದರಿಂದಾಗ ತ್ಯಾಜ್ಯ ನೀರು ರಸ್ತೆ ತುಂಬೆಲ್ಲಾ ಹರಿಯುತ್ತಿದೆ. ಈ ಬಗ್ಗೆ ಹತ್ತಾರು ಬಾರಿ ಗ್ರಾಪಂಗೆ ದೂರು ನೀಡಿದ್ದರು ಏನೂ ಪ್ರಯೋಜನವಾಗಿಲ್ಲ. ರೋಗರುಜಿನಗಳು ಹರಡುವ ಸಾಧ್ಯತೆಯಿದ್ದು ಶಾಶ್ವತ ಪರಿಹಾರ ದೊರಕಿಸಿಕೊಡಬೇಕು. ಗಾಯತ್ರಿ ಕೋಡಿನಾಗೇನಹಳ್ಳಿ ಎಕೆ ಕಾಲನಿಯಲ್ಲಿ ಮನೆಗಳ ತ್ಯಾಜ್ಯ ನೀರು ಹರಿಯಲು ಚರಂಡಿಯನ್ನು ನರೇಗಾ ಯೋಜನೆ ಅಡಿ ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸಲು ಕ್ರಮವಹಿಸಲಾಗಿದೆ. ಗ್ರಾಪಂನಲ್ಲಿ ಬೇರೆ ಅನುದಾನದಲ್ಲಿ ಚರಂಡಿ ನಿರ್ಮಿಸಲು ಅನುದಾನ ಇಲ್ಲ. ಶಾಸಕರ ಪ್ರದೇಶಾಭಿವೃದ್ಧಿ ಅನುದಾನಕ್ಕು ಮನವಿ ಮಾಡಲಾಗಿದೆ. ಶ್ರೀ ಚರಂಡಿ ನಿರ್ಮಿಸಲು ಕ್ರಮವಹಿಸಲಾಗುವುದು. ವನಜಾ ಪಿಡಿಒ, ತ್ಯಾಗಟೂರು ಗ್ರಾಪಂ