ಕೋಡಿಕಲ್ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ ಶಾಂತಿಭಂಗ ಪ್ರಕರಣ ದಾಖಲು

crime
Published on

ಮಂಗಳೂರು: ಕೋಡಿಕಲ್ ರಸ್ತೆಯ ಡೊಮಿನಿಕ್ ಚರ್ಚ್ ಬಳಿ ಗಲಾಟೆ ಮಾಡಿಕೊಂಡ ಮೂವರ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ ಶಾಂತಿ ಭಂಗ ಪ್ರಕರಣ ದಾಖಲಾಗಿದೆ.


ಆಟೋ ರಿಕ್ಷಾ ಚಾಲಕ ಅಶೋಕನಗರದ ಬಾಪೂಜಿನಗರದ ನಿವಾಸಿಗಳಾದ ಅಶ್ರಫ್ (32), ಬೈಕ್ ಸವಾರ ರವಿರಾಜ್ (29), ಸಹ ಸವಾರ ಚಂದ್ರಶೇಖರ್ (34) ಅವರ ವಿರುದ್ಧ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ ನಡೆಸಿದ ವಿರುದ್ಧ ಪ್ರಕರಣ ದಾಖಲಾಗಿದೆ.


ಹೊಯ್ಸಳ ಕರ್ತವ್ಯದಲ್ಲಿದ್ದ ಕಾನ್‌ಸ್ಟೇಬಲ್‌ಗಳಾದ ನವೀನ್ ಮತ್ತು ಮಮತರವರಿಗೆ ಠಾಣೆಯಿಂದ ಕರೆ ಮಾಡಿ ತಿಳಿಸಿದಂತೆ ಅವರು ಸ್ಥಳಕ್ಕೆ ತೆರಳಿದಾಗ ಗಲಾಟೆ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಅವರು ಜಗಳವನ್ನು ಬಿಡಿಸಿ, ಸಮಾಧಾನ ಪಡಿಸಿ ಠಾಣೆಗೆ ಬರುವಂತೆ ತಿಳಿಸಿದಾಗ ಸಮಾಧಾನಗೊಳ್ಳದೆ ಮತ್ತೆ ಮಾತಿಗೆ ಮಾತು ಬೆಳೆಸಿ ಹೊಡೆದಾಡಿಕೊಂಡಿದ್ದಾರೆ ಎಂದು ನವೀನ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net