ಕೋಡಿ ಗ್ರಾಪಂ ಅಧ್ಯಕ್ಷರಾಗಿ ಪ್ರಭಾಕರ ಮೆಂಡನ್ ಆಯ್ಕೆ

mendon new
Published on

ಕೋಟ: ಕೋಡಿ ಗ್ರಾಪಂ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಕೆ. ಪ್ರಭಾಕರ ಮೆಂಡನ್ ಆಯ್ಕೆಯಾಗಿದ್ದಾರೆ. ಸೋಮವಾರ ಚುನಾವಣಾಧಿಕಾರಿ ಡಾ.ಅರುಣ್ ಕುಮಾರ್ ಮಾರ್ಗದರ್ಶನದಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆದಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಯಾರೂ ಸೂಚಕರಿಲ್ಲದ ಕಾರಣ ಆಯ್ಕೆ ಪ್ರಕ್ರಿಯೆ ನಡೆದಿಲ್ಲ. ಉಳಿದಂತೆ ಬಿಜೆಪಿ ಬೆಂಬಲಿತ ಸದಸ್ಯರಾಗಿ ಕೃಷ್ಣ ಪೂಜಾರಿ, ಗೀತಾ ಖಾರ್ವಿ, ಸತೀಶ್ ಜಿ. ಕುಂದರ್, ಜಯಶ್ರೀ ಪೂಜಾರಿ, ಸರಸ್ವತಿ, ದೇವಕಿ ಖಾರ್ವಿ, ರಶ್ಮಿತಾ, ಪ್ರಸಾದ್ ಬೆಂಗ್ರೆ, ವಿನಯ ಬೆಂಗ್ರೆ, ಕುಸುಮ ಖಾರ್ವಿ ಬೆಂಗ್ರೆ ಆಯ್ಕೆಯಾಗಿದ್ದರೆ, ಕಾಂಗ್ರೆಸ್ ಬೆಂಬಲಿತ ಅಂತೋನಿ ಡಿಸೋಜ ಅವಿರೋಧವಾಗಿ ಆಯ್ಕೆಯಾಗಿದ್ದರು.

ಹಕ್ಕುಪತ್ರ ಇನ್ನಿತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಡಿ.22ರಂದು ನಡೆದ ಗ್ರಾಪಂ ಚುನಾವಣೆಯನ್ನು ಗ್ರಾಮಸ್ಥರು ಬಹಿಷ್ಕರಿಸಿದ್ದರು. ನಂತರ ಜಿಲ್ಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮನವೊಲಿಸಿ 2021ರ ಮಾರ್ಚ್ 29ಕ್ಕೆ ಇಲ್ಲಿ ಮರುಚುನಾವಣೆ ನಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net