

ಹರಪನಹಳ್ಳಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕುಂಚೂರು ಗ್ರಾಮದ ಕೆರೆ ಕೋಡಿ ಬಿದ್ದು ಜಮೀನುಗಳತ್ತ ನೀರು ನುಗ್ಗಿದೆ. ಕಳೆದೆರಡು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ 500 ಹೆಕ್ಟೇರ್ ಪ್ರದೇಶದ ಕುಂಚೂರು ಕೆರೆಯ ಕೋಡಿ ಬಿದ್ದಿದೆ.
ಇದರಿಂದಾಗಿ ಹಲವು ಎಕರೆ ಪ್ರದೇಶಗಳಲ್ಲಿನ ಬೆಳೆ ಹಾನಿಯಾಗಿದೆ. ಕಳೆದ ವರ್ಷವೂ ಕೆರೆ ಕೋಡಿ ಬಿದ್ದಿತ್ತು. ಈ ಬಾರಿಯೂ ಕೆರೆಯ ಕೋಡಿ ಬಿದ್ದ ಪರಿಣಾಮ ನೋಡಲು ಸುತ್ತಲಿನ ಗ್ರಾಮಗಳಿಂದ ಜನರು ಕುಟುಂಬ ಸಮೇತರಾಗಿ ಆಗಮಿಸಿ ಸೆಲ್ಫಿ ತೆಗೆದುಕೊಂಡು ಆನಂದಿಸಿದರು.