

ಉಡುಪಿ: ಪೇಜಾವರ ಮಠದ ಗೋವರ್ಧನ ಗಿರಿ ಟ್ರಸ್ಟ್ ವತಿಯಿಂದ 1987 ರಿಂದ ನಡೆಸಲ್ಪಡುತ್ತಿರುವ ನಂದಗೋಕುಲ ಗೋಶಾಲೆಯ ಕಟ್ಟಡವು ಶಿಥಿಲಗೊಂಡಿದ್ದರಿಂದ ನೂತನವಾಗಿ ನಿರ್ಮಾಣಗೊಂಡ ಗೋಶಾಲೆ ಕಟ್ಟಡವನ್ನು ಭಾನುವಾರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಗೋಪೂಜೆ ನೆರವೇರಿಸಿ, ಲೋಕಾರ್ಪಣೆಗೊಳಿಸಿದರು.
ಕೆ ಎಂ ಎಫ್ ನಿರ್ದೇಶಕ ರವಿರಾಜ್ ಹೆಗ್ಡೆ , ನಗರಸಭೆ ಸ್ಥಾಯೀ ಸಮಿತಿ ಅಧ್ಯಕ್ಷ ಶ್ರೀಶ ಕೊಡವೂರು , ನಗರಸಭಾ ಸದಸ್ಯ ವಿಜಯ್ ಕೊಡವೂರು , ದಾನಿ ನಾಗರಾಜ ಪುರಾಣಿಕ್, ಕೆ.ಆರ್. ನಗರ , ಟ್ರಸ್ಟ್ ಸದಸ್ಯ ಡಾ.ಸರ್ವೋತ್ತಮ ಉಡುಪ , ಇಂದು ಶೇಖರ ಹೆಗಡೆ , ಸುಬ್ರಹ್ಮಣ್ಯ ಭಟ್ , ಕೃಷ್ಣ ಭಟ್ , ಗೋಶಾಲೆ ವ್ಯವಸ್ಥಾಪಕ ಪ್ರಾಣೇಶ್ ಜೋಷಿ , ಪ್ರಮೀಳಾ ಜೋಶಿ , ಕಟ್ಟಡದ ನಿರ್ಮಾಣ ಗುತ್ತಿಗೆದಾರ ಚಂದ್ರಶೇಖರ್ ಉಪಸ್ಥಿತರಿದ್ದರು . ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು .