ಅಖಿಲ ಕೊಡವ ಸಮಾಜಕ್ಕೆ ಆಯ್ಕೆ

KODAVA SAMAJA
Published on

ವಿರಾಜಪೇಟೆ:

ಅಖಿಲ ಕೊಡವ ಸಮಾಜದ ನೂತನ ಗೌರವ ಕಾರ್ಯದರ್ಶಿಯಾಗಿ ಕೀತಿಯಂಡ ವಿಜಯಕುಮಾರ್ (ಶೆರಿ) ಅವರನ್ನು ಕೇಂದ್ರ ಸಮಿತಿ ಒಮ್ಮತದಿಂದ ನೇಮಕ ಮಾಡಿದೆ. ವೃತ್ತಿಪರ ಎಂಜಿನಿಯರ್ ಆಗಿರುವ ವಿಜಯ ಕುಮಾರ್ ಎರಡು ದಶಕಗಳ ಕಾಲ ಈಜಿಪ್ಟ್‌ನಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಜಂಟಿ ಕಾರ್ಯದರ್ಶಿಯಾಗಿ ಮೂವೆರ ರೇಖಾ ಪ್ರಕಾಶ್ ಅವರನ್ನು ನೇಮಕ ಮಾಡಲಾಗಿದೆ. ರೇಖಾ ಪ್ರಕಾಶ್ ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅಮ್ಮಣಿಚಂಡ ರಾಜ ನಂಜಪ್ಪ ಮತ್ತು ಅಪ್ಪುಮಣಿಯಂಡ ತುಳಸಿ ಕಾಳಪ್ಪ ಅವರುಗಳ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಈ ನೇಮಕ ನಡೆದಿದೆ ಎಂದು ಅಖಿಲ ಕೊಡವ ಸಮಾಜದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net