ಕೊಡವ ಸಾಹಿತ್ಯ ಅಕಾಡೆಮಿ ಖಂಡನೆ

MAHESH-NACHAIHA
Published on

ಮಡಿಕೇರಿ: ಕೊಡವರನ್ನು ಕುಪ್ಯ-ಚೇಲೆತೊಟ್ಟುಕೊಂಡು ದೇವಸ್ಥಾನಕ್ಕೆ ಪ್ರವೇಶಿಸುವಂತಿಲ್ಲ. ಬರುವುದಾದರೆ ಕುಪ್ಯ-ಚೇಲೆ ಬಿಚ್ಚಿಟ್ಟು ಪಂಚೆ-ಶಲ್ಯವನ್ನು ತೊಟ್ಟು ಬರಬಹುದೆಂದು ತಾಕೀತು ಮಾಡಿರುವುದಲ್ಲದೆ ಹಲ್ಲೆ ನಡೆಸಿ ಹೊರಗಟ್ಟಲು ಯತ್ನಿಸಿದ ಘಟನೆಯನ್ನು ತೀವ್ರವಾಗಿ ಖಂಡಿಸುವುದಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಹುಸಂಸ್ಕೃತಿಯ ನಮ್ಮ ಭಾರತ ದೇಶದಲ್ಲಿ ಕೊಡವರ ಸುಸಂಸ್ಕೃತಿ ಹಾಗೂ ಸಂಸ್ಕಾರಕ್ಕೆ ಈ ರೀತಿಯ ಮನಸ್ಥಿತಿಯ ವ್ಯಕ್ತಿಗಳು ಕಳಂಕ ತರುತ್ತಿದ್ದಾರೆ. ದೇಶದೆಲ್ಲೆಡೆ ಹಾಗೂ ಪ್ರಪಂಚದಾದ್ಯಂತ ಗಮನ ಸೆಳೆದಿರುವ ಕೊಡವ ಸೀರೆ, ಕುಪ್ಯ-ಚೇಲೆ, ಪೀಚೆಕತ್ತಿಯನ್ನು ದೇವಸ್ಥಾನಕ್ಕೆ ಧರಿಸಿಕೊಂಡು ಬರಕೂಡದೆಂಬ ಫತ್ವಾ ಹೊರಡಿಸಿದ ವ್ಯಕ್ತಿಗಳು ಸಮಾಜದಲ್ಲಿ ಶಾಂತಿ ಕಾಪಾಡಲು ಸಾಧ್ಯವಿಲ್ಲ. ಈ ರೀತಿಯ ವ್ಯಕ್ತಿಗಳು ಯಾವುದೇ ರಾಜಕೀಯ ಪಕ್ಷದಲ್ಲಾಗಲಿ ಅಥವಾ ಸಂಘ-ಸಂಸ್ಥೆಗಳಲ್ಲಾಗಲಿ ನಾಯಕರಾಗಿರಲು ಸಮರ್ಥರಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net