ಸಿಎನ್‌ಸಿ ವತಿಯಿಂದ ಎಡಮ್ಯಾರ್‌೧ ಆಚರಣೆ

14adarshkdga6
Published on

ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ ಕೊಡವ ಬುಡಕಟ್ಟು ಸಮುದಾಯದ ಹೊಸ ವರ್ಷ ಎಡಮ್ಯಾರ್‌೧ ಆಚರಣೆಯನ್ನು ಮಡಿಕೇರಿ ಕೋಲ್ ಮಂದ್‌ನಲ್ಲಿ ಬುಧವಾರ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಸತತ ೨೭ ವರ್ಷಗಳಿಂದ ಸಿಎನ್‌ಸಿ ವತಿಯಿಂದ ಸಾರ್ವತ್ರಿಕವಾಗಿ ಈ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಕೊಡವ ಅಸ್ತಿತ್ವದ ಬಗ್ಗೆ ವಿಶ್ವಕ್ಕೆ ಮಾಹಿತಿ ನೀಡಲು, ಕೊಡವರ ವಿಶಿಷ್ಟ ಸಂಸ್ಕೃತಿಯನ್ನು ಪ್ರದರ್ಶಿಸಲು ಕೊಡವ ಜಾನಪದ ಸಾಂಪ್ರದಾಯಿಕ ಉತ್ಸವಗಳನ್ನು ಸಾರ್ವಜನಿಕವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗವನ್ನು ಕೊಡವ ಪ್ರದೇಶದ ಪ್ರಿಮೆಟಿವ್(ಪ್ರಾಚೀನ) ಬುಡಕಟ್ಟು ಎಂದು ಗುರುತಿಸಬೇಕು. ಸಮಗ್ರ ಸಬಲೀಕರಣಕ್ಕಾಗಿ ಸೂಕ್ಷ್ಮಾತಿ ಸೂಕ್ಷ್ಮ ಮೈಕ್ರೋ ಅಲ್ಪಸಂಖ್ಯಾತ ಕೊಡವ ಬುಡಕಟ್ಟು ಜನಾಂಗವನ್ನು ನಮ್ಮ ಸಂವಿಧಾನದ ೩೪೦ ಮತ್ತು ೩೪೨ ನೇ ವಿಧಿಗಳ ಅಡಿಯಲ್ಲಿ ಎಸ್‌ಟಿ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಬುಡಕಟ್ಟಿನ ಮಾತೃಭಾಷೆಯನ್ನು ನಮ್ಮ ಸಂವಿಧಾನದ ೮ನೇ ಶೆಡ್ಯೂಲ್ನಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೂ ಮೊದಲು ಮುಂಜಾನೆ ೬ ಗಂಟೆಗೆ ಬೆಟ್ಟತ್ತೂರು ಗ್ರಾಮದ ಕೂಪದಿರ ಕುಟುಂಬದ ಭೂಮಿಯಲ್ಲಿ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಜೋಡೆತ್ತುಗಳ ಸಹಾಯದಿಂದ ಭತ್ತದ ಗದ್ದೆಯಲ್ಲಿ ಸಾಂಪ್ರದಾಯಿಕ ಉಳುಮೆ ಮಾಡಿದರು. ನಂತರ ಮಡಿಕೇರಿ ಕೋಲ್ ಮಂದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡವ ಹಕ್ಕೋತ್ತಾಯಗಳು ಮತ್ತು ಗುರಿಗಳ ತ್ವರಿತ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಿರ್ಣಯ ಅಂಗೀಕರಿಸಲಾಯಿತು. ಕಾನೂನುಬದ್ಧ ಆಕಾಂಕ್ಷೆಗಳನ್ನು ಶಾಶ್ವತ ಮತ್ತು ಬಾಳಿಕೆ ಬರುವ ರಾಜಕೀಯ-ಸಾಂವಿಧಾನಿಕ ಪರಿಹಾರದ ಅಳತೆಯಾಗಿ ಪರಿಗಣಿಸಲು ಸರ್ಕಾರವನ್ನು ಒತ್ತಾಯಿಸಲಾಯಿತು.

ಇದೇ ಸಂದರ್ಭದಲ್ಲಿ ಡಾ.ಅಂಬೇಡ್ಕರ್ ಜಯಂತಿಯನ್ನೂ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಕಿಲ.ಕೆ.ಪಿಬಾಲಸುಬ್ರಮಣ್ಯಂ, ಪುಲ್ಲೇರ ಕಾಳಪ್ಪ, ಸಮಾಜ ಬಾಂಧವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net