ಆಸ್ಟ್ರೇಲಿಯಾದ ಜನಾಂಗ ಶಾಸ್ತ್ರಜ್ಞ ಭೇಟಿ

kodava
Published on

ಮಡಿಕೇರಿ:

ಕೊಡವ ಬಾಳೋಪಾಟ್ ಮತ್ತು ಸಂಸ್ಕೃತಿ ವಿಚಾರವಾಗಿ ಆಳವಾದ ಅಧ್ಯಯನದಲ್ಲಿ ತೊಡಗಿರುವ ಆಸ್ಟೆçÃಲಿಯದ ಜನಾಂಗ ಶಾಸ್ತçಜ್ಞ ಜಾನ್ ಜೇಮ್ಸ್ ನೇಪಿಯರ್ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅವರನ್ನು ಈಚೆಗೆ ಭೇಟಿಯಾಗಿ ಸುಮಾರು ಎರಡು ಗಂಟೆಗಳ ಕಾಲ ಚರ್ಚಿಸಿದರು.

ವೀರಾಜಪೇಟೆಯಲ್ಲಿರುವ ನಾಚಯ್ಯ ಮನೆಗೆ ಭೇಟಿ ನೀಡಿದ ನೇಪಿಯರ್, ಕೊಡವ ಸಂಸ್ಕೃತಿ ವಿಶ್ವದಲ್ಲಿಯೇ ವಿಶಿಷ್ಟವಾಗಿದ್ದು, ಇಂತಹ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ನಾಚಯ್ಯ ಸೇವೆಯನ್ನು ಶ್ಲಾಘಿಸಿದರು. ಆಸ್ಟೆçÃಲಿಯಾದ ಸಿಡ್ನಿ ಹ್ಯಾರೋಸಿಟಿಯ ಶಾಸಕರಾಗಿರುವ ಕೊಡಗು ಮೂಲದ ಚರಿಷ್ಮ ಕಲಿಯಂಡ ಅವರನ್ನು ಕಂಡು ಮಾತನ್ನಾಡುವುದಾಗಿ ಹೇಳಿದ ಅವರು, ತಾನು ಕೊಡವ ಬಾಳೋಪಾಟ್ ಹಾಗೂ ಕೊಡವ ಸಂಸ್ಕೃತಿಯ ವಿಚಾರವಾಗಿ ಆಸ್ಟೆçÃಲಿಯಾದಲ್ಲಿ ಹಲವು ಲೇಖನಗಳನ್ನು ಬರೆದಿದ್ದೇನೆ. ಅಧ್ಯಯನ ನಿಮಿತ್ತ ಕೊಡಗಿಗೆ 2008ರಿಂದ ಬರುತ್ತಿದ್ದು ಮುಂದಿನ ದಿನಗಳಲ್ಲಿ ಪುಸ್ತಕ ಹೊರತರಲಿದ್ದೇನೆ ಎಂದರು.

ನೇಪಿಯರ್ ಅವರು ಈ ಪ್ರಯುಕ್ತ ಈಗಾಗಲೇ ಹಲವರಿಂದ ಮಾಹಿತಿ ಸಂಗ್ರಹಿಸಿದ್ದು, ಬಾಳೋಪಾಟ್‌ನಲ್ಲಿ ಬರುವ ಶಬ್ದಾರ್ಥ, ಗೂಡಾರ್ಥಗಳನ್ನು ಅಕಾಡೆಮಿ ಅಧ್ಯಕ್ಷರಿಂದ ತಿಳಿದುಕೊಂಡರು. ಬಾಳೋಪಾಟನ್ನು ಆಧುನಿಕ ತಂತ್ರಜ್ಞಾನದ ಮೂಲಕ ವಿಶ್ವವ್ಯಾಪಿ ಪರಿಚಯಿಸುವ ಬಗ್ಗೆ ಅಕಾಡೆಮಿ ಅಧ್ಯಕ್ಷರ ಜತೆ ಉತ್ಸುಕತೆ ತೋರಿದರು.

ಹಿರಿಯ ಕೊಡವ ಸಾಹಿತಿಗಳಾದ ಡಾ. ಐ.ಮಾ. ಮುತ್ತಣ್ಣ, ಡಾ. ಬೊವ್ವೇರಿಯಂಡ ನಂಜಮ್ಮ ಚಿಣ್ಣಪ್ಪ, ಡಾ. ಮೋಗ್ಲಿಂಗ್, ಜೆ. ರಿಕ್ಟರ್ ಕೊಡವ ಸಂಸ್ಕೃತಿಯ ಮೇಲೆ ಬರೆದಿರುವ ಸಾಹಿತ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ನೇಪಿಯರ್ ಭೇಟಿಯ ಕುರುಹಾಗಿ ಕೊಡವ ಚಿಹ್ನೆಯಿರುವ ಲಾಂಛನ ನೀಡಿ ಗೌರವಿಸಲಾಯಿತು. ಈ ವೇಳೆ ಪ್ರಮೀಳ ನಾಚಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net