ಮಡಿಕೇರಿ ಕೊಡವ ಸಮಾಜದಿಂದ ಖಂಡನೆ

kodava
Published on

ಮಡಿಕೇರಿ:

ಕಟ್ಟೆಮಾಡು ಮಹಾ ಮೃತ್ಯುಂಜಯ ದೇವಾಲಯದಲ್ಲಿ ಪ್ರಥಮ ವಾರ್ಷಿಕ ಉತ್ಸವದ ಸಂದರ್ಭ ಗ್ರಾಮದ ಕೆಲವು ಕೊಡವ ಜನಾಂಗದವರು ತಮ್ಮ ಸಾಂಪ್ರದಾಯಿಕ ಉಡುಗೆಯೊಂದಿಗೆ ತೆರಳಿದ ಸಂದರ್ಭ ದೇವಾಲಯ ಪ್ರವೇಶಿಸದಂತೆ ಅಡ್ಡಿಪಡಿಸಿರುವುದನ್ನು ಮಡಿಕೇರಿಯ ಮಂದ್‌ನಲ್ಲಿ ಪುತ್ತರಿ ಕೋಲಾಟ್ ಕಾರ್ಯಕ್ರಮ ವೇಳೆ ಖಂಡಿಸಲಾಯಿತು.

ಕೊಡವ ಜನಾಂಗದವರು ಪ್ರಾಚೀನಕಾಲದಿಂದಲೂ ಕೊಡವ ಸಾಂಪ್ರದಾಯಿಕ ಉಡುಗೆಯೊಂದಿಗೆ ಭಕ್ತಿ ಪೂರ್ವಕವಾಗಿ ತೆರಳುವುದು, ಧಾರ್ಮಿಕ ಆಚರಣೆಯ ನಂಬಿಕೆಯೊAದಿಗೆ ಸಾಂಸ್ಕೃತಿಕ ಪ್ರದರ್ಶನ ನೀಡುತ್ತಿರುವುದು ಇಡೀ ಜಿಲ್ಲೆಗೆ ತಿಳಿದಿರುವ ವಿಷಯ. ಆದರೆ ಕೆಲವರು ದ್ವೇಷ ಭಾವನೆಯಿಂz ಈ ಕೆಲಸ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿದ್ದ ಪುರುಷರು ಮತ್ತು ಮಹಿಳೆಯರು ಕಟ್ಟೆಮಾಡು ಘಟನೆ ಮತ್ತು ಕೊಡವ ವಿರೋಧಿ ಧೊರಣೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.

ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತ ಬೊಳ್ಳಪ್ಪ, ಮಾಜಿ ಜಂಟಿ ಕಾರ್ಯದರ್ಶಿ ಶಾಂತಿಯAಡ ಸನ್ನಿ ಪೂವಯ್ಯ, ಬೊಪ್ಪಂಡ ಶ್ಯಾಂಪೂಣಚ್ಚ, ಕಲಿಯಮಂಡ ಸರಸ್ವತಿ ಮತ್ತಿತರರು ಮಾತನಾಡಿದರು. ಪ್ರಕರಣ ವಿರೋಧಿಸಿ ಮುಂದಿನ ದಿನಗಳಲ್ಲಿ ನಡೆಯುವ ಎಲ್ಲಾ ಪ್ರತಿಭಟನೆಗಳಿಗೆ ಬೆಂಬಲ ನೀಡಲು ಈ ಸಂದರ್ಭ ತೀರ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net