ಯಲ್ಲಾಪುರ: ತಾಲೂಕಿನ ಕೊಡಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವವನ್ನು ಜ.10 ಹಾಗೂ 11 ರಂದು ಆಚರಿಸಲಾಗುವುದು ಎಂದು ಎಸ್‌ಡಿಎಂಸಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಮೆಣಸುಪಾಲ ಹೇಳಿದರು.
ಅವರು ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಜ.10 ರಂದು ಅಮೃತ ಮಹೋತ್ಸವ ಉದ್ಘಾಟನೆ, ಸ್ಮರಣ ಸಂಚಿಕೆ ಬಿಡುಗಡೆ, ದಾನಿಗಳಿಗೆ ಗೌರವ ಕಾರ್ಯಕ್ರಮ ನಡೆಯಲಿದೆ. ಯೋಧರಾಗಿರುವ ಶಾಲೆಯ ಹಳೆಯ ವಿದ್ಯಾರ್ಥಿಗಳನ್ನು ಹಾಗೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜ. 11ರ ರಾತ್ರಿ ವಿದ್ಯಾ ಗಜಾನನ ಕಲಾ ಬಳಗದಿಂದ ‘ಕಳಚಿದ ಕುಂಡಲ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಅಮೃತ ಮಹೋತ್ಸವ ಸಮಿತಿ ಪ್ರಮುಖರಾದ ರವೀಂದ್ರ ದೇಸಾಯಿ, ರವಿ ಕೈಟ್ಕರ್, ವಿಶ್ವೇಶ್ವರ ಹೆಗಡೆ, ಗಣಪತಿ ಸಿದ್ದಿ, ನಿತ್ಯಾನಂದ ಮಳಿಕ, ನಾಗರಾಜ ಸಾವಂತ, ನಾರಾಯಣ ಕೈಟ್ಕರ್ ಇತರರಿದ್ದರು.