ಸಾಮಾಜಿಕ ಅಂತರದಿಂದ ಪಡಿತರ ಪಡೆದುಕೊಳ್ಳಿ

11-04kodekal03
Published on

ಕೊಡೇಕಲ್: ಕರೊನಾ ವೈರಸ್ ತಡೆಗಟ್ಟುವ ಗುರುತರ ಜವಾಬ್ದಾರಿ ಎಲ್ಲರ ಮೇಲಿದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡು ಪಡಿತರ ಪಡೆದುಕೊಳ್ಳಬೇಕು ಎಂದು ಕೊಡೇಕಲ್ ನಾಡ ಕಚೇರಿ ಉಪತಹಸೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ ಹೇಳಿದರು.

ಗ್ರಾಮದ ನ್ಯಾಯಬೆಲೆ ಅಂಗಡಿ ಸಂಖ್ಯೆ3ಕ್ಕೆ ಭೇಟಿ ನೀಡಿ ಅಂಗಡಿ ಮಾಲೀಕರಿಂದ ಅಗತ್ಯ ಮಾಹಿತಿ ಮತ್ತು ದಾಸ್ತಾನು ವಿವರ ಪಡೆದುಕೊಂಡ ನಂತರ ಮಾತನಾಡಿದ ಅವರು, ಲಾಕ್ಡೌನ ಹಿನ್ನೆಲೆಯಲ್ಲಿ ಒಟ್ಟಿಗೆ ಎರಡು ತಿಂಗಳು ಪಡಿತರವನ್ನು ನೀಡಲಾಗುತ್ತಿದೆ. ಎಲ್ಲರೂ ಮಾಸ್ಕ್ ಧರಿಸಿ ಪಡಿತರ ಹಂಚುವ ಕಾರ್ಯ ಮುಗಿಯುವರೆಗೂ ಸಾಮಾಜಿಕ ಅಂತರ ಕಾಪಾಡಲು ಸುಣ್ಣದ ವೃತ್ತಗಳನ್ನು ಹಾಕಿ ಎಂದು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಹೇಳಿದರು.

ಗ್ರಾಮ ಲೇಖಪಾಲಕ ಹಣಮಂತ್ರಾಯ ಹಂಡರಗಲ್, ಪ್ರಮೋದ ಜೋಶಿ, ಅಶೋಕ ಅಂಗಡಿ ಸೇರಿದಂತೆ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net