ಹೆಜ್ಜೆ ಗುರುತು ತಂದ ಆತಂಕ

ಪನ್ಯ ತೋಟದಲ್ಲಿ ಪತ್ತೆಯಾಗಿರುವ ಹೆಜ್ಜೆ ಗುರುತು
 ಪನ್ಯ ತೋಟದಲ್ಲಿ ಪತ್ತೆಯಾಗಿರುವ ಹೆಜ್ಜೆ ಗುರುತು
ಪನ್ಯ ತೋಟದಲ್ಲಿ ಪತ್ತೆಯಾಗಿರುವ ಹೆಜ್ಜೆ ಗುರುತು
Published on: 

ಸುಂಟಿಕೊಪ್ಪ: ಸಮೀಪದ ಪನ್ಯ ತೋಟದಲ್ಲಿ ಹುಲಿ ಅಥವಾ ಚಿರತೆ ಹೋಲುವ ಪ್ರಾಣಿಯ ಹೆಜ್ಜೆ ಗುರುತು ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಅತಂಕ ಮನೆ ಮಾಡಿದೆ.

ಬುಧವಾರ ಜಮೀನು ಕೆಲಸಕ್ಕೆ ತೆರಳಿದ ಕಾರ್ಮಿಕರು ಹೆಜ್ಜೆ ಗುರುತು ನೋಡಿ ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅರಣ್ಯಾಧಿಕಾರಿಗಳು ಹುಲಿಯದ್ದೇ ಅಥವಾ ಚಿರತೆಯದ್ದೇ ಎಂಬುದು ಇನ್ನೂ ಖಚಿತವಾಗಿಲ್ಲ. ಪನ್ಯ ಸಮೀಪದಲ್ಲೇ ಕಸ ವಿಲೇವಾರಿ ಘಟಕದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇವುಗಳ ಬೇಟೆಗೆ ಚಿರತೆ ಬಂದಿರುವ ಸಾಧ್ಯತೆ ಇದೆ. ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ.

ಅರಣ್ಯ ಇಲಾಖೆ ಗ್ರಾಮ ಪಂಚಾಯಿತಿಯೊಂದಿಗೆ ಸಮನ್ವಯ ಸಾಧಿಸಿ ಕಸ ವಿಲೇವಾರಿ ಘಟಕದಲ್ಲಿನ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.