

ಸುಂಟಿಕೊಪ್ಪ: ಕೊಡಗು ಸುರಕ್ಷಾ ಆಂದೋಲನ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಜನ ಜಾಗೃತಿ ಆಂದೋಲನ ರಥವನ್ನು ಸುಂಟಿಕೊಪ್ಪದ ಕನ್ನಡ ವೃತ್ತದಲ್ಲಿ ಶುಕ್ರವಾರ ಸ್ವಾಗತಿಸಲಾಯಿತು.
ಮಧ್ಯಾಹ್ನ ಸಿದ್ಧಾಪುರದಿಂದ ಸುಂಟಿಕೊಪ್ಪಕ್ಕೆ ಆಗಮಿಸಿದ ಜನ ಜಾಗೃತಿ ಆಂದೋಲನ ರಥವನ್ನು ಸ್ವಾಗತಿಸಿ ಮಾತನಾಡಿದ ಜಿ.ಪಂ. ಮಾಜಿ ಸದಸ್ಯ ಬಿ.ಬಿ.ಭಾರತೀಶ್ ರಾಷ್ಟ್ರದ ಸುರಕ್ಷತೆ ಕೇವಲ ಸರ್ಕಾರದ ಕೆಲಸವಲ್ಲ, ದೇಶದ ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯವಾಗಿದೆ. ದೇಶದ ಅಖಂಡತೆ, ಏಕತೆ ಮತ್ತು ಆಂತರಿಕ ಸುರಕ್ಷತೆಗೆ ಧಕ್ಕೆ ತರುತ್ತಿರುವ ಆಕ್ರಮ ಬಾಂಗ್ಲಾದೇಶಿ ವಲಸಿಗರ ಗಡಿಪಾರಿಗಾಗಿ ರಾಷ್ಟ್ರೀಯ ಸುರಕ್ಷತೆ ಕಾಯುವ ನಿಟ್ಟಿನಲ್ಲಿ ಜನಜಾಗೃತಿ ಜನಾಂದೋಲನ ರಥಯಾತ್ರೆಯನ್ನು ಸೆ.28 ರಿಂದ ಅ.9 ರವರೆಗೆ ನಡೆಸುತ್ತಿದ್ದು, 9ರಂದು ಗಾಂಧಿ ಮೈದಾನದಲ್ಲಿ ಬಹೃತ್ ಸಮಾವೇಶ ನಡೆಯಲಿದ್ದು, ಪ್ರತಿಯೊಬ್ಬ ಪ್ರಜೆಯೂ ಜನಜಾಗೃತಿ ಜನಾಂದೋಲನದಲ್ಲಿ ಪಾಲ್ಗೊಂಡು ದೇಶ ರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ಜನ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕ ಚಂದ್ರ ಉಡ್ವತ್, ಕೆದಕಲ್ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಂಜುಪೊನ್ನಪ್ಪ, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಡಿ.ನರಸಿಂಹ, ಧನುಕಾವೇರಪ್ಪ, ವಾಸು, ಪ್ರಕಾಶ, ದಯಾನಂದ, ಗ್ರಾ.ಪಂ. ಮಾಜಿ ಸದಸ್ಯೆ ವಸಂತಿ, ಪ್ರಾ.ಕೃ.ಪ.ಸ.ಸಂ.ನಿರ್ದೇಶಕಿ ಲೀಲಾ ಮೇದಪ್ಪ, ತ್ರೀಶಲ್ ಕರುಂಬಯ್ಯ, ಮತ್ತಿತರರು ಇದ್ದರು.